Urdu   /   English   /   Nawayathi

ಬಸ್​ನಲ್ಲೇ ಕಂಡಕ್ಟರ್​-ಪ್ರಯಾಣಿಕನ ಮಧ್ಯೆ ಫೈಟ್: ಜಗಳ ಬಿಡಿಸಲು ಹೋದವನ ಸ್ಥಿತಿ ಗಂಭೀರ ​

share with us

ಮೈಸೂರು: 30 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಟಿಕೆಟ್ ತೆಗೆದುಕೊಳ್ಳುವ ವಿಚಾರವಾಗಿ ಆರಂಭವಾದ ಗಲಾಟೆಯಿಂದ ಯುವಕನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದಲ್ಲಿ ನಡೆದಿದೆ. ಕೋರೆಹುಂಡಿ ಗ್ರಾಮದ ಚಂದ್ರು (19) ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ?: ಕೋರೆಹುಂಡಿ ಗ್ರಾಮದ ನಿವಾಸಿಯಾದ ಗಣೇಶ್ ಎಂಬುವರು ತನ್ನ ಪತ್ನಿ, ಇಬ್ಬರು ಮಕ್ಕಳು, ಅತ್ತೆ ಹಾಗೂ ಸ್ನೇಹಿತನಾದ ಚಂದ್ರುವಿನೊಂದಿಗೆ ನಂಜನಗೂಡಿನಿಂದ ಮೈಸೂರಿಗೆ ಸಾರಿಗೆ ಬಸ್ (ಕೆಎ 42, ಎಫ್ 1955)ನಲ್ಲಿ ತೆರಳುತ್ತಿದ್ದರು. ಮಗುವಿಗೆ ಟಿಕೆಟ್ ನೀಡುವ ವಿಚಾರಕ್ಕೆ ಬಸ್ ಕಂಡಕ್ಟರ್ ಹಾಗೂ ಗಣೇಶ್ ನಡುವೆ ಮಾತಿಗೆ ಮಾತು ಬೆಳೆದು, ಇಬ್ಬರು ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಚಂದ್ರು ಅವರು ಜಗಳ ಬಿಡಿಸಲು ಮುಂದಾಗಿದ್ದರು ಎನ್ನಲಾಗ್ತಿದೆ. ಇದರಿಂದ ಕೋಪಗೊಂಡ ಕಂಡಕ್ಟರ್, ಗಣೇಶ್ ಹಾಗೂ ಚಂದ್ರುವಿನ ವಿರುದ್ಧ ದೂರು ನೀಡಬೇಕೆಂದು ಪ್ರಯಾಣಿಕರನ್ನು ಕೆಳಗಿಸಿ ಪೊಲೀಸ್ ಠಾಣೆಗೆ ಹೋಗುವಂತೆ ಬಸ್ ಚಾಲಕನಿಗೆ ಹೇಳಿದ್ದರು. ಆಗ ಬಸ್ ಅನ್ನು ತಿರುಗಿಸಿಕೊಂಡು ಪೊಲೀಸ್ ಠಾಣೆಗೆ ಹೋಗುವಾಗ ಗಣೇಶ್ ಹಾಗೂ ಕುಟುಂಬಸ್ಥರು ಬೇರೆ ಬಸ್‌ನಲ್ಲಿ ಮೈಸೂರಿಗೆ ತೆರಳಿದ್ದಾರೆ. ಬಸ್‌ನ ಒಳಗಿದ್ದ ಚಂದ್ರು ಠಾಣೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಬಸ್‌ನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆಗ ಚಂದ್ರುನನ್ನು ಕಂಡಕ್ಟರ್ ಹಾಗೂ ಬಸ್ ಚಾಲಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ಆತನ ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಚಂದ್ರುವಿನ ಸ್ಥಿತಿ ನೋಡಿದ ಕುಟುಂಬಸ್ಥರು ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಂಡಕ್ಟರ್ ಹಲ್ಲೆ ಮಾಡಿದ್ದರಿಂದ ಚಂದ್ರು ಸ್ಥಿತಿ ಗಂಭೀರವಾಗಿದೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಗಣೇಶ್ ದೂರು ನೀಡಿದ್ದಾರೆ. ಕಂಡಕ್ಟರ್ ಅವರು ಪ್ರತಿದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا