Urdu   /   English   /   Nawayathi

ಐಎನ್‌ಎಕ್ಸ್ ಮೀಡಿಯಾ ಕೇಸ್: ಚಿದಂಬರಂಗೆ ಜಾಮೀನು ನಕಾರ, ಸಾಕ್ಷಿಗಳನ್ನು ಪ್ರಭಾವಿಸಬಹುದು ಎಂದ ನ್ಯಾಯಾಲಯ

share with us

ನವದೆಹಲಿ: 30 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಪಿ ಚಿದಂಬರಂಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಮಾಜಿ ಹಣಕಾಸು ಸಚಿವ ಚಿದಂಬರಂ ಅವರಿಗೆ ಜಾಮೀನು ನಿಡಿದ್ದಾದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಕೋರ್ಟ್ ಹೇಳಿದೆ. ನವದೆಹಲಿಯ ಜೋರ್ ಬಾಗ್ ನಿವಾಸದಿಂದ ಆಗಸ್ಟ್ 21 ರಂದು ಸಿಬಿಐ ಮಾಜಿ ಸಚಿವ ಚಿದಂಬರಂ ಅವರನ್ನು ಬಂಧಿಸಿತ್ತು. ಸಧ್ಯ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅಕ್ಟೋಬರ್ 3 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ 2007 ರಲ್ಲಿ  ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು ಐಎನ್‌ಎಕ್ಸ್ ಮಿಡಿಯಾಗೆ ನಿಡಿದ ವಿದೇಶಿ ನೇರ ಹೂಡಿಕೆ ಅನುಮತಿಯಲ್ಲಿ ಅಕ್ರಮಗಳಿವೆ ಎಂದು ಸಿಬಿಐ ಆರೋಪಿಸಿದೆ. 305 ಕೋಟಿ ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಸಿಬಿಐ ಮೇ 15, 2017ರಂದು ಚಿದಂಬರಂ ಅವರ ವಿರುದ್ಧ ಎಫ್ಐಆರ್ ದಾಕಲಿಸಿತ್ತು. ಐಎನ್ಎಕ್ಸ್ ಮೀಡಿಯಾ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ, ಇದು ಕಾರ್ತಿ ಚಿದಂಬರಂ, ಐಎನ್ಎಕ್ಸ್ ಮೀಡಿಯಾ ಮತ್ತು ಇಂದ್ರಾಣಿ ಮತ್ತು ಪೀಟರ್ ಮುಖರ್ಜಿಯಾ ವಿರುದ್ಧ ಮೇ 2017 ರಲ್ಲಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ. ಐಎನ್‌ಎಕ್ಸ್ ಮೀಡಿಯಾದ ಮಾಜಿ ಮಾಲೀಕರು ತನಿಖಾ ಸಂಸ್ಥೆಗಳಿಗೆ ಚಿದಂಬರಂ ತಮ್ಮ ಮಗನನ್ನು ಭೇಟಿಯಾಗಲು ಮತ್ತು ಅವರ ವ್ಯವಹಾರಕ್ಕೆ ಸಹಾಯ ಮಾಡಲು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا