Urdu   /   English   /   Nawayathi

ರೈಲಿನಲ್ಲಿ ಮೊಬೈಲ್, ಹ್ಯಾಂಡ್‌ಬ್ಯಾಗ್ ಕಳವು, ಇಬ್ಬರು ಆರೋಪಿಗಳ ಬಂಧನ

share with us

ಮಂಗಳೂರು: 28 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ರೈಲು ಪ್ರಯಾಣಿಕರ ಮೊಬೈಲ್ ಮತ್ತು ಹ್ಯಾಂಡ್ ಬ್ಯಾಗ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಕೊಂಕಣ ರೈಲ್ವೆ ನಿಗಮದ ರೈಲ್ವೆ ಸುರಕ್ಷತಾ ಪಡೆಯ(ಆರ್‌ಪಿಎ್) ಸಿಬ್ಬಂದಿ ಪತ್ತೆ ಹಚ್ಚಿ ಬಂಧಿಸಿ ಅವರಿಂದ 3 ಮೊಬೈಲ್ ಹಾಗೂ 10,500 ರೂ. ವಶಪಡಿಸಿಕೊಂಡಿದ್ದಾರೆ. ಕೇರಳದ ಕಣ್ಣೂರ್ ನಿವಾಸಿಗಳಾದ ಶಫೀಕ್ ಮತ್ತು ಸಿ.ಪಿ.ಸಿಯಾದ್ ಬಂಧಿತ ಆರೋಪಿಗಳು.

ಪ್ರಕರಣದ ವಿವರ: ತಿರುವನಂತಪುರಂ-ಹಝರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್(ನಂ.22655) ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಮತ್ತು ಇತರ ಬೆಲೆಬಾಳುವ ಸೊತ್ತುಗಳನ್ನು ಕಳವು ಮಾಡಲಾಗುತ್ತಿದೆ ಎಂದು ಬುಧವಾರ ತಿರುವನಂತಪುರಂನಿಂದ ಕೋಟಕ್ಕೆ ಬಿ2 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಅರ್ಪಿತ್ ಅಲೆಗ್ಸಾಂಡರ್ ಅವರು ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ತಲುಪಿದಾಗ ಆರ್‌ಪಿಎ್ಗೆ ದೂರು ನೀಡಿದ್ದರು. ಕೂಡಲೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಟಿಟಿಇ(ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಗಜಾನನ ಬಿ. ಭಟ್ ಅವರು ಆರ್‌ಪಿಎ್ ಎಎಸ್‌ಐ ಕೆ.ಎ.ಕ್ಯೂಟ್ ಮತ್ತು ಕಾನ್ಸ್‌ಟೆಬಲ್ ಕರುಣಾಕರ್ ಅವರ ಬಳಿ ದೂರು ದಾಖಲಿಸಿದ್ದರು.

ಶಂಕೆ ಮೇರೆಗೆ ವಶಕ್ಕೆ ಪಡೆದು ವಿಚಾರಣೆ
ರೈಲಿನ ಬೋಗಿಯಲ್ಲಿ ಕುಳಿತಲ್ಲಿ ಕುಳಿತುಕೊಳ್ಳದೆ ಆಚೀಚೆ ಸಂಚರಿಸುತ್ತಿರುವ ಇಬ್ಬರು ಶಂಕಿತ ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರ ಬೇಕೆಂದು ಆರ್‌ಪಿಎ್ ಸಿಬಂದಿ ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ಕಾರವಾರದಲ್ಲಿರುವ ಆರ್‌ಪಿಐ ಸಬ್‌ಇನ್ಸ್‌ಪೆಕ್ಟರ್ ಅವರು ರೈಲಿನ ಸ್ಥಿತಿಯನ್ನು ಆನ್‌ಲೈನ್ ಮೂಲಕ ಪರಿಶೀಲನೆ ನಡೆಸಿದಾಗ ಇಬ್ಬರು ಶಂಕಿತ ಯುವಕರು ರೈಲಿನಲ್ಲಿ ಆಚೀಚೆ ಓಡಾಡುತ್ತಾ ಜನರಲ್ ಬೋಗಿಗಳಿಗೆ ಪ್ರವೇಶಿಸುತ್ತಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಕ್ರಾಸಿಂಗ್‌ನಲ್ಲಿ ರೈಲು ನಿಲ್ಲುವ ಸಂದರ್ಭ ಈ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯುವಂತೆ ಉಡುಪಿ ಜಿಲ್ಲೆ ಸೇನಾಪುರ ರೈಲ್ವೆ ಸ್ಟೇಷನ್ ಮಾಸ್ಟರ್‌ಗೆ ಸೂಚಿಸಿದ್ದರು. ಕ್ರಾಸಿಂಗ್‌ನಲ್ಲಿ ರೈಲು ನಿಂತಾಗ ಒಬ್ಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತನ ಬಳಿ ಅರ್ಪಿತ್ ಅಲೆಗ್ಸಾಂಡರ್ ಅವರಿಂದ ಕದ್ದ ಮೊಬೈಲ್ ೆನ್ ಪತ್ತೆಯಾಗಿತ್ತು. ಬಳಿಕ ಇನ್ನೊಬ್ಬ ಶಂಕಿತನನ್ನು ಭಟ್ಕಳದಲ್ಲಿ ವಶಕ್ಕೆ ಪಡೆದು ಎರಡು ಮೊಬೈಲ್ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.

ವಾರೀಸುದಾರರಿಗೆ ಸೊತ್ತು ಹಸ್ತಾಂತರ
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ರೈಲಿನಲ್ಲಿ ತಿರುವನಂತಪುರಂನಿಂದ ಮಡಗಾಂವ್‌ಗೆ ಎ1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಟಿ.ಕೆ.ತಂಗನ್ ಎಂಬ ಮಹಿಳೆಯ ಮೂರು ಮೊಬೈಲ್ ೆನ್ ಮತ್ತು ನಗದು ಹೊಂದಿದ್ದ ಹ್ಯಾಂಡ್ ಬ್ಯಾಗ್ ಕಳವುಗೈದಿರುವುದು ಗೊತ್ತಾಯಿತು. ಕಳ್ಳರಿಂದ ವಶಪಡಿಸಿದ್ದ ಸೊತ್ತುಗಳನ್ನು ಟಿ.ಕೆ.ತಂಗನ್ ಮತ್ತು ಅಲೆಗ್ಸಾಂಡರ್ ಅವರಿಗೆ ಹಸ್ತಾಂತರಿಸಲಾಗಿದೆ. ಆರೋಪಿ ಶಫೀಕ್‌ನನ್ನು ಮಂಗಳೂರಿನ ಪೊಲೀಸರಿಗೆ ಹಾಗೂ ಸಿ.ಪಿ.ಸಿಯಾದ್‌ನನ್ನು ಮಣಿಪಾಲ ಪೊಲೀಸರಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಲಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا