Urdu   /   English   /   Nawayathi

ಹಾಡಹಗಲೇ ಆರ್​ಎಸ್​ಎಸ್​ ಕಾರ್ಯಕರ್ತನ ಮೇಲೆ ಲಾಂಗ್​ಗಳಿಂದ ದಾಳಿ: ಎಟಿಎನ್​ಸಿ ರಸ್ತೆಯಲ್ಲಿ ಕೃತ್ಯ

share with us

ಶಿವಮೊಗ್ಗ: 25 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಎಟಿಎನ್​ಸಿ ಕಾಲೇಜು ರಸ್ತೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಲಾಂಗ್​ಗಳಿಂದ ಹಲ್ಲೆ ನಡೆಸಿದ್ದಾರೆ. ಸುಮನ್ ಹಲ್ಲೆಗೆ ಒಳಗಾದವರು. ಬುಧವಾರ ಎಟಿಎನ್​ಸಿ ರಸ್ತೆಯಲ್ಲಿ ಸುಮನ್ ಸಾಗುತ್ತಿರುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ದುಷ್ಕರ್ಮಿಗಳ ಗುಂಪು ಲಾಂಗ್​ಗಳಿಂದ ದಾಳಿ ನಡೆಸಿತು ಎನ್ನಲಾಗಿದೆ. ದಾಳಿಯಲ್ಲಿ ಸುಮನ್ ಕೈ ಹಾಗೂ ಬೆನ್ನಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ಯ ಕೋಮಿನ ಯುವಕರ ಗುಂಪು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا