Urdu   /   English   /   Nawayathi

ಮೋದಿ ಮೇಲೆ ಒತ್ತಡ ಇಲ್ಲ, ಕಾಶ್ಮೀರಕ್ಕಾಗಿ ದಂಗೆ ಆಗುತ್ತೆ ವಿಶ್ವನಾಯಕರ ವಿರುದ್ಧ ಅಸಹಾಯಕ ಇಮ್ರಾನ್ ಖಾನ್ ಆಕ್ರೋಶ!

share with us

ಪಾಕಿಸ್ತಾನ: 25 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಕಾಶ್ಮೀರದ ವಿಷಯವನ್ನು ಜಾಗತಿಕ ವಿಷಯವನ್ನಾಗಿಸುವುದರಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿಷಯದಲ್ಲಿ ವಿಶ್ವಸಮುದಾಯದ ಬಗ್ಗೆ ಬೇಸರಗೊಂಡಿರುವುದಾಗಿ ಹೇಳಿದ್ದಾರೆ. ಕಾಶ್ಮೀರದ ವಿಷಯದಲ್ಲಿ ಜಾಗತಿಕ ಸಮುದಾಯ ಮೋದಿ ಮೇಲೆ ಒತ್ತಡ ಹೇರುತ್ತಿಲ್ಲ ಅಸಹಾಯಕ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ನೀತಿಯ ಪರಿಣಾಮವಾಗಿ, ಆರ್ಟಿಕಲ್ 370 ರದ್ದತಿ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ವಿರುದ್ಧ ಯಾವುದೇ ಟೀಕೆಗಳು, ಒತ್ತಡ ವ್ಯಕ್ತವಾಗಿಲ್ಲ. ಪಾಕಿಸ್ತಾನ ಎಷ್ಟೇ ಆರೋಪ ಮಾಡಿದರೂ ಸಹ ಅದಕ್ಕೆ ಕಿಮ್ಮತ್ತಿಲ್ಲದಂತಾಗಿದ್ದು, ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನವನ್ನು ಅಕ್ಷರಸಹ ಒಬ್ಬಂಟಿಯನ್ನಾಗಿಸುವ ಉದ್ದೇಶ ಯಶಸ್ವಿಯಾಗಿದೆ. ಈಗ ಪಾಕಿಸ್ತಾನದ ಕೂಗು ಅರಣ್ಯರೋಧನವಾಗಿದ್ದು, ಹತಾಶ ಅಸಹಾಯಕ ಸ್ಥಿತಿಯಲ್ಲಿರುವ ಪಾಕಿಸ್ತಾನ ಪ್ರಧಾನಿ, ಒಂದೆಡೆ ತಮ್ಮ ವೈಫಲ್ಯವನ್ನು ಒಪ್ಪಿಕೊಂಡು, ಮತ್ತೊಂದೆಡೆ ವಿಶ್ವಸಮುದಾಯದ ಬಗ್ಗೆಯೇ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ ಮೇಲೆ  ಜಾಗತಿಕ ನಾಯಕರು ಒತ್ತಡ ಹೇರುತ್ತಿಲ್ಲ. ಭಾರತದ ವಿರುದ್ಧ ನಾವು ಯುದ್ಧ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಅಣ್ವಸ್ತ್ರ ಯುದ್ಧ, ಜಾಗತಿಕ ಮಟ್ಟದಲ್ಲಿ ಮುಸ್ಲಿಮರ ತೀವ್ರಗಾಮಿತ್ವ, ಕಾಶ್ಮೀರಕ್ಕಾಗಿ ಪ್ರಾದೇಶಿಕವಾಗಿ ಜನರು ದಂಗೆ ಏಳುವ ಬೆದರಿಕೆಯನ್ನು ಇಮ್ರಾನ್ ಖಾನ್ ಹಾಕಿದ್ದು, ಕೂಡಲೇ ಅಂತಾರಾಷ್ಟ್ರೀಯ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಖಾನ್ ಹೇಳಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا