Urdu   /   English   /   Nawayathi

ಕಂಡ ಕನಸಿನಲ್ಲಿ ನಿಶ್ಚಿತಾರ್ಥದ ಉಂಗುರವನ್ನೇ ನುಂಗಿದ್ಲು ಯುವತಿ...!

share with us

ಕ್ಯಾಲಿಫೋರ್ನಿಯಾ(ಅಮೆರಿಕ): 17 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ತಾನು ಕಂಡ ಕನಸಿನಲ್ಲಿ ಯುವತಿವೋರ್ವಳು ಕೈಬೆರಳಲ್ಲಿದ್ದ ಉಂಗುರವನ್ನೇ ನುಂಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ನಾನು ನಿದ್ದೆಯಲ್ಲಿ ಉಂಗುರ ನುಂಗಿದ್ದೇನೆ. ಉಂಗುರ ನುಂಗಿರುವುದು ನನಗೆ ತಿಳಿದಿದೆ. ಆದ್ರೆ ಅದು ಕನಸೆಂದು ತಿಳಿದು ಮತ್ತೆ ನಿದ್ದೆ ಮಾಡಿದೆ. ಬೆಳಗ್ಗೆ ಎದ್ದು ನೋಡಿದಾಗ ಉಂಗುರ ಕಾಣಿಸಿಲ್ಲ. ಈ ಬಗ್ಗೆ ನನ್ನ ಭಾವಿ ಪತಿಗೆ ಹೇಳಿದರೂ, ಅವರು ನನ್ನ ಮಾತನ್ನು ನಂಬಲಿಲ್ಲ. ಬಳಿಕ ನಾನು ಡಾಕ್ಟರ್​ ಬಳಿ ತೆರಳಿ ಎಕ್ಸ್​ರೇ ಮಾಡಿಸಿಕೊಂಡಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಯುವತಿ ಜೆನ್ನಾ ಇವಾನ್ಸ್​ ಹೇಳಿದ್ದಾರೆ. ರಾತ್ರಿ ನನಗೆ ಒಂದು ಕನಸು ಬಿದ್ದಿತ್ತು. ಆ ಕನಸಿನಲ್ಲಿ ನಾನು ಮತ್ತು ನನ್ನ ಭಾವಿ ಪತಿ ಟ್ರೈನ್​ನಲ್ಲಿ ಹೋಗುತ್ತಿರುವಾಗ ವಿಲನ್​ಗಳು ಎದುರಾದರು. ಬಳಿಕ ನನ್ನ ಪ್ರೀತಿಯ ಉಂಗುರವನ್ನ ರಕ್ಷಿಸಿಕೊಳ್ಳುವುದಕ್ಕೆ ಅದನ್ನು ನುಂಗಿದೆ ಎಂದು ಜೆನ್ನಾ ಇವಾನ್ಸ್ ವಿವರಿಸಿದ್ದಾರೆ. ಆಸ್ಪತ್ರೆಗೆ ಹೋದಾಗ ಜೆನ್ನಾ ಹೊಟ್ಟೆಯಿಂದ ಉಂಗುರವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಇನ್ನು ಈ ಬಗ್ಗೆ ಜೆನ್ನಾ ಇವಾನ್ಸ್ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದರು. ಈ ಪೋಸ್ಟ್​ ಸಖತ್​ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا