Urdu   /   English   /   Nawayathi

ಬಂಗಾರದ ಶೌಚಾಲಯ ದರೋಡೆ! ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!

share with us

ಲಂಡನ್​: 16 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಬ್ರಿಟಿಷ್​ ಅರಮನೆಯಿಂದ ಬಂಗಾರದ ಶೌಚಾಲಯವನ್ನು ಕಳ್ಳರು ಕದ್ದೊಯ್ದಿದ್ದು, ಬ್ರಿಟನ್​ ಸೇರಿದಂತೆ ವಿಶ್ವಕ್ಕೆ ಅಚ್ಚರಿಯಾಗಿದೆ. 18 ಕ್ಯಾರಟ್​ಗಳ ಬಂಗಾರದಿಂದ ಮಾಡಿದ ಶೌಚಾಲಯವನ್ನು ಲಂಡನ್​ನ ಬ್ಲನಿಯಮ್​ ಅರಮನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಶನಿವಾರ ಕಳ್ಳರು ಈ ಬಂಗಾರದ ಶೌಚಾಲಯವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಶೌಚಾಲಯ ಸುಮಾರು 9 ಕೋಟಿವರೆಗೂ ಬೆಲೆ ಬಾಳುತ್ತಂತೆ. ನ್ಯೂಯಾರ್ಕ್​ನ ಸೋಲೋಮನ್​ ಆರ್​ ಗುಗೆನ್ಹೀಮ್ ಸಂಗ್ರಹಾಲಯದಿಂದ ಎರಡು ದಿನಗಳ ಹಿಂದೆಷ್ಟೇ ಲಂಡನ್​ಗೆ ತರಲಾಗಿತ್ತು. ಅಕ್ಟೋಬರ್​ 27ರವರೆಗೆ ಪ್ರದರ್ಶನಕ್ಕೆ ಇಡಬೇಕೆಂದು ನಿರ್ವಾಹಕರು ತೀರ್ಮಾನಿಸಿದ್ದರು. ಅಷ್ಟರಲ್ಲೇ ಕಳ್ಳರು ಕಣ್ಣು ಹಾಕಿ ಕೈಚಳಕವನ್ನು ತೋರಿಸಿದ್ದಾರೆ. ಬಿಗಿ ಬಂದೋಬಸ್ತ್​ ನಡುವೆಯೂ ಕಳ್ಳರು ಕೌಶಲ ಪ್ರದರ್ಶಿಸಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا