Urdu   /   English   /   Nawayathi

ಆರ್ಥಿಕ ಚೇತರಿಕೆಯ 'ಪಂಚ ಸೂತ್ರ' ಸಲಹೆ ಬಳಿಕ ಮೋದಿಗೆ ಮತ್ತೆ ಟಿಪ್ಸ್​ ಕೊಟ್ಟ ಡಾ. ಸಿಂಗ್​

share with us

ನವದೆಹಲಿ: 15 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳನ್ನು ಬದಲಾಯಿಸುವ ಮೊದಲು ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳ ಅಭಿಪ್ರಾಯಗಳು ತೆಗೆದುಕೊಳ್ಳಬೇಕು. ಫೆಡರಲ್ ನೀತಿ ಮತ್ತು ಸಹಕಾರಿ ಫೆಡರಲಿಸಂಗೆ ಏಕಪಕ್ಷೀಯ ನಿರ್ಧರ ಒಳ್ಳೆಯದಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ನಿಧಾನಗತಿಯ ಆರ್ಥಿಕತೆಯ ಚೇತರಿಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ಎರಡು ದಿನಗಳ ಹಿಂದಷ್ಟೆ ನೀಡಿದ್ದರು. ಜುಲೈನಲ್ಲಿ ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳನ್ನು ಬದಲಾಯಿಸಿತು. ರಕ್ಷಣೆ ಮತ್ತು ಆಂತರಿಕ ಭದ್ರತೆಗಾಗಿ ಮೀಸಲಿಡಲಾದ ಹಣದ ಹಂಚಿಕೆ ಮಾರ್ಗಗಳನ್ನು ಸೂಚಿಸಲು ಸಮಿತಿಗೆ ಆದೇಶಿಸಿತು.  ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಾ. ಸಿಂಗ್, ಆಯೋಗದ ಉಲ್ಲೇಖದ ನಿಯಮಗಳಲ್ಲಿ ಯಾವುದೇ ಬದಲಾವಣೆಯನ್ನು ತರುವ ಮೊದಲು ರಾಜ್ಯಗಳೊಂದಿಗೆ ಸಮಾಲೋಚಿಸಿ ನಡೆಸಬೇಕು ಎಂದರು. ಕೇಂದ್ರ ಸರ್ಕಾರವು ಉತ್ತಮವಾದ ನಿಯಮಗಳನ್ನು ಉಲ್ಲೇಖಿಸಲು ಬಯಸಿದರೆ ಅವುಗಳ ಬಗ್ಗೆ ಮುಖ್ಯಮಂತ್ರಿಗಳಿಂದ ಬೆಂಬಲಪಡೆಯಬೇಕು. ಅದು ನೀತಿ ಆಯೋಗ ಆಶ್ರಯದಲ್ಲಿದೆ. ಇಲ್ಲದಿದ್ದರೆ ಬಲವಾದ ಹಿಡಿತ ಹೊಂದಿ (ಕೇಂದ್ರ) ಸರ್ಕಾರವು ರಾಜ್ಯಗಳ ಸಂಪನ್ಮೂಲಗಳನ್ನು ದೋಚಲು ಪ್ರಯತ್ನಿಸುತ್ತಿತ್ತು ಎಂದು ಆಪಾದಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا