Urdu   /   English   /   Nawayathi

ಅಣಬೆ ಸೇವನೆ ಪುರುಷರನ್ನು ಕ್ಯಾನ್ಸರ್​ ಅಪಾಯದಿಂದ ತಪ್ಪಿಸುತ್ತಾ?

share with us

ವಾಷಿಂಗ್ಟನ್​(ಯುಎಸ್​ಎ): 14 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಅಣಬೆ ಸೇವನೆಯಿಂದಾಗಿ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್​ ಅಪಾಯದಿಂದ ದೂರ ಉಳಿಯಬಹುದು ಎಂದು ಅಧ್ಯಯನ ತಿಳಿಸಿದೆ. ಇಂಟರ್​ನ್ಯಾಶನಲ್​ ಜರ್ನಲ್​ ಅಫ್​ ಕ್ಯಾನ್ಸರ್​ ಪತ್ರಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ. ಅಣಬೆಯ ಸತತ ಸೇವನೆಯಿಂದಾಗಿ ಮಧ್ಯವಯಸ್ಕರು ಮತ್ತು ವಯಸ್ಕರು ಪ್ರಾಸ್ಟೇಟ್(ಪುರುಷ ಜನನೇಂದ್ರಿಯಕ್ಕೆ ಸಂಬಂಧಿಸಿದ ಒಂದು ಗ್ರಂಥಿ) ಕ್ಯಾನ್ಸರ್​ ಅಪಾಯದಿಂದ ದೂರ ಉಳಿಯಬಹುದು ಎಂದು ಅಧ್ಯಯನ ತಿಳಿಸಿದೆ. 40ರಿಂದ 79 ವರ್ಷ ವಯಸ್ಸಿನ 36,499 ಪುರುಷರನ್ನು ಒಗ್ಗೂಡಿಸಿ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಅಣಬೆ ಸೇವನೆ ಮಾಡಿದವರು 8 ಶೇ. ಕಡಿಮೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯದಲ್ಲಿರುವುದು ಬೆಳಕಿಗೆ ಬಂದಿದೆ. ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಅಣಬೆ ಸೇವನೆ ಮಾಡಿದವರು 17 ಶೇ. ಕಡಿಮೆ ಕ್ಯಾನ್ಸರ್​ ಅಪಾಯದಿಂದಿದ್ದಾರೆ ಅಂದು ಅಧ್ಯಯನದಿಂದ ತಿಳಿದು ಬಂದಿದೆ. ಈ ಬಗ್ಗೆ ಅಧ್ಯಯನದ ಪ್ರಮುಖ ಲೇಖಕ ಮತ್ತು ಜಪಾನ್‌ನ ತೋಹೊಕು ಯೂನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪಿಎಚ್‌ಡಿ ವಿದ್ಯಾರ್ಥಿ ಶು ಜಾಂಗ್ ಮಾತನಾಡಿ, ಅಣಬೆಗಳ ಪ್ರಭೇದಗಳ ಮಾಹಿತಿಯನ್ನು ಸಂಗ್ರಹಿಸದ ಕಾರಣ, ಯಾವ ಜಾತಿಯ ಅಣಬೆಯಿಂದ ಈ ಪ್ರಯೋಜನ ಎಂದು ಹೇಳುವುದು ಕಷ್ಟ ಎಂದು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا