Urdu   /   English   /   Nawayathi

ಮೊಬೈಲ್ ತಂದ ಆಪತ್ತು; ಪತಿ ಜೊತೆ ಮಾತನಾಡುತ್ತಾ ಮೇಲೆ ಕುಳಿತ ಮಹಿಳೆಗೆ ಕಚ್ಚಿದ ಹಾವು, ಸಾವು!

share with us

ಗೋರಾಖ್ಪುರ: 12 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮೈಮರೆತು ಪತಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ಬಂದ ಮಹಿಳೆಯೊಬ್ಬರು ಮಿಲನ ಕ್ರಿಯೆಯಲ್ಲಿ ತೊಡಗಿದ್ದ ಅವಳಿ ಹಾವುಗಳ ಮೇಲೆ ಕುಳಿತುಕೊಂಡಿದ್ದು, ಹಾವು ಕಚ್ಚಿದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಗೋರಾಖ್ಪುರದ ರಿಯಾನ್ವ್ ಗ್ರಾಮದಲ್ಲಿ ಬುಧವಾರ ನಡೆದಿದೆ. ಥೈಲ್ಯಾಂಡ್ ನಲ್ಲಿ ಕೆಲಸ ಮಾಡಿಕೊಂಡಿರುವ ಜೈ ಸಿಂಗ್ ಯಾದವ್ ಎಂಬುವವರ ಪತ್ನಿ ಗೀತಾ ಸಾವನ್ನಪ್ಪಿದ ಮಹಿಳೆ ಎಂದು ತಿಳಿದುಬಂದಿದೆ. ಮಂಚದ ಮೇಲೆ ಹೊದಿಕೆ ಹಾಕಿದ್ದರ ಕೆಳಗೆ ಅವಳಿ ಹಾವುಗಳು ತಮ್ಮ ಏಕಾಂತದ ಕಾಲ ಕಳೆಯುತ್ತಿದ್ದವು. ಈ ವೇಳೆ ಪತಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಾ ಬಂದ ಮಹಿಳೆ ಹಾವುಗಳ ಮೇಲೆ ಕುಳಿತುಕೊಂಡಿದ್ದಾರೆ. ಕೂಡಲೇ ಹಾವುಗಳು ಮಹಿಳೆಯನ್ನು ಕಚ್ಚಿವೆ. ಈ ವೇಳೆ ಮಹಿಳೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ವೇಳೆ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಸಾವನ್ನಪ್ಪಿದ ಬಳಿಕ ಕುಟುಂಬ ಸದಸ್ಯರು ಮನೆಗೆ ಬಂದ ಸಂದರ್ಭದಲ್ಲೂ ಹಾವುಗಳು ಹಾಸಿಗೆ ಮೇಲೆ ಆಟವಾಡುತ್ತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರು ಹಾವುಗಳನ್ನು ಬಡಿದು ಸಾಯಿಸಿದ್ದಾರೆ. ಹಾವುಗಳು ಏಕಾಂತ ಸಮಯ ಕಳೆಯುತ್ತಿರುವ ವೇಳೆಯೇ ಮಹಿಳೆ ಅವುಗಳ ಮೇಲೆ ಕುಳಿತ ಪರಿಣಾಮ ಕಚ್ಚಿದೆ ಎಂದು ಪ್ರಾಣಿ ತಜ್ಞರು ಹೇಳಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا