Urdu   /   English   /   Nawayathi

ನೂತನ ಕಾಯ್ದೆ;ವಾಯುಮಾಲಿನ್ಯ ನಿಯಂತ್ರಣ ಸರ್ಟಿಫಿಕೇಟ್ ಗೆ ಮುಗಿಬಿದ್ದ ಸವಾರರು, ಸರ್ವರ್ ಸ್ಥಗಿತ

share with us

ನವದೆಹಲಿ: 10 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ನೂತನ ವಾಹನ ಕಾಯ್ದೆಯ ಪ್ರಕಾರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ನೀಡಲಾಗುವ ಪೊಲ್ಯೂಷನ್ ಅಂಡರ್ ಕಂಟ್ರೋಲ್(ವಾಯುಮಾಲಿನ್ಯ ನಿಯಂತ್ರಣ)ನ ಸಮರ್ಪಕ ಸರ್ಟಿಫಿಕೇಟ್ ವಾಹನ ಸವಾರರ ಬಳಿ ಇಲ್ಲದಿದ್ದರೆ ಭಾರೀ ದಂಡ ಕಟ್ಟಬೇಕಾಗುತ್ತದೆ. ಇದೀಗ ಭಾರೀ ದಂಡಕ್ಕೆ ಬೆಚ್ಚಿಬಿದ್ದಿರುವ ವಾಹನ ಸವಾರರು ಪಿಯುಸಿ(ಪೊಲ್ಯೂಷನ್ ಅಂಡರ್ ಕಂಟ್ರೋಲ್) ಸರ್ಟಿಫಿಕೇಟ್ ಪಡೆಯಲು ದಿಲ್ಲಿಯಲ್ಲಿ ಐದಾರು ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿರುವ ಘಟನೆ ವರದಿಯಾಗಿದೆ. ಪೊಲ್ಯೂಷನ್ ಅಂಡರ್ ಸರ್ಟಿಫಿಕೇಟ್ ನೀಡಲು ರಾಜಧಾನಿಯಲ್ಲಿ 950 ಕೇಂದ್ರಗಳಿದ್ದು, ವಾಹನ ಸವಾರರು ಸರ್ಟಿಫಿಕೇಟ್ ಪಡೆಯಲು ಮುಗಿಬಿದ್ದ ಪರಿಣಾಮ ಸರ್ವರ್ ಕ್ರ್ಯಾಶ್ ಆಗಿರುವುದಾಗಿ ವರದಿ ತಿಳಿಸಿದೆ. ಪ್ರತಿದಿನ ದೆಹಲಿಯಲ್ಲಿ 10 ಸಾವಿರ ಪೊಲ್ಯೂಷನ್ ಅಂಡರ್ ಸರ್ಟಿಫಿಕೇಟ್ ನೀಡಲಾಗುತ್ತಿದ್ದು, ಆ ಸಂಖ್ಯೆ ಇದೀಗ 45 ಸಾವಿರಕ್ಕೇರಿದೆ. ಅದಕ್ಕೆ ಕಾರಣ ಸೆಪ್ಟೆಂಬರ್ 1ರಿಂದ ಜಾರಿಗೊಂಡ ನೂತನ ವಾಹನ ಕಾಯ್ದೆ ಎಂಬುದಾಗಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಸಾರಿಗೆ ಇಲಾಖೆ ಪೊಲ್ಯೂಷನ್ ಅಂಡರ್ ಸರ್ಟಿಫಿಕೇಟ್ ನೀಡುವ ಕೇಂದ್ರಗಳ ಸಂಖ್ಯೆ ಹೆಚ್ಚಳ ಮಾಡಲು ಮತ್ತು ಸಾಫ್ಟ್ ವೇರ್ ಅಪ್ ಗ್ರೇಡ್ ಮಾಡುವುದಾಗಿ ವಿವರಿಸಿದ್ದಾರೆ. ದೆಹಲಿಯಲ್ಲಿ ಒಟ್ಟು 1.09 ಕೋಟಿ ವಾಹನಗಳಿವೆ. ಅದರಲ್ಲಿ 75 ಲಕ್ಷ ವಾಹನಗಳು ಓಡಾಟ ನಡೆಸುತ್ತಿದ್ದು, ಪ್ರತಿವರ್ಷ ಅಂದಾಜು 50 ಲಕ್ಷ ವಾಹನಗಳು ವಾಯುಮಾಲಿನ್ಯ ತಪಾಸಣೆ ನಡೆಸಿ, ಸರ್ಟಿಫಿಕೇಟ್ ಪಡೆಯುತ್ತಿರುವುದಾಗಿ ವರದಿ ಹೇಳಿದೆ. ನೂತನ ಮೋಟಾರು ವಾಹನ ಕಾಯ್ದೆ ಜಾರಿಯಾಗುವವರೆಗೂ ದಿಲ್ಲಿಯಲ್ಲಿ ವಾಹನ ಸವಾರರು ನಿರಂತರವಾಗಿ ಪೊಲ್ಯೂಷನ್ ತಪಾಸಣೆಗೆ ಆಗಮಿಸುತ್ತಿರಲಿಲ್ಲವಾಗಿತ್ತು. ಏತನ್ಮಧ್ಯೆ ವಾಹನ ಸವಾರರಿಗೆ ಸೂಕ್ತ ಸಮಯಕ್ಕೆ ಪೊಲ್ಯೂಷನ್ ತಪಾಸಣೆ ನಡೆಸಲು ಸಂದೇಶವನ್ನು ಕಳುಹಿಸಲು ಪ್ರಯತ್ನಿಸಿದ್ದೇವು. ಆದರೆ ನಮ್ಮ ಹೆಚ್ಚಿನ ವಾಹನ ಸವಾರರ ಮೊಬೈಲ್ ನಂಬರ್ ಡಾಟಾಬೇಸ್ ಇರಲಿಲ್ಲವಾಗಿತ್ತು. ಅಲ್ಲದೇ ಹಲವು ವಾಹನ ಸವಾರರ ಮೊಬೈಲ್ ಸಂಖ್ಯೆ ನಕಲಿಯಾಗಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا