Urdu   /   English   /   Nawayathi

ಐಫೋನ್ ಪ್ರಿಯರ ಕಾತರಕ್ಕೆ ಬಿತ್ತು ತೆರೆ... ಐಫೋನ್​ 11 ಬಿಡುಗಡೆಗೆ ಕ್ಷಣಗಣನೆ

share with us

ಕ್ಯಾಲಿಫೋರ್ನಿಯಾ: 09 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಆ್ಯಪಲ್ ಮೊಬೈಲ್​ ಪ್ರಿಯರು ಅತ್ಯಂತ ಕಾತರದಿಂದ ಕಾಯುತ್ತಿದ್ದ ಕ್ಷಣ ಬಂದಿದ್ದು, ಐಫೋನ್​ 11 ಮಂಗಳವಾರದಂದು ಬಿಡುಗಡೆಯಾಗಲಿದೆ. ಕ್ಯಾಲಿಫೋರ್ನಿಯಾದ ಸ್ಟೀವ್ ಜಾಬ್ಸ್ ಥಿಯೇಟರ್​ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಐಫೋನ್ 11 ಅನಾವರಣಗೊಳ್ಳಲಿದೆ. ನೂತನ ಐಫೋನ್ ಜೊತೆಗೆ ಹೊಸ ಆ್ಯಪಲ್ ವಾಚ್ ಸಹ ಇದೇ ವೇಳೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಂದಿನಂತೆ ಆ್ಯಪಲ್ ಸಂಸ್ಥೆ ಮೂರು ವಿವಿಧ ಮಾಡೆಲ್​ನ ಐಫೋನ್ ಮಂಗಳವಾರ ಬಿಡುಗಡೆ ಮಾಡಲಿದೆ. ಈ ಹಿಂದಿನ ಮಾಡೆಲ್​ಗಳಾದ ಐಫೋನ್​ ಎಕ್ಸ್​ಆರ್, ಐಫೋನ್ ಎಕ್ಸ್​ಎಸ್​ಗಳಂತೆ ಬಹುತೇಕ ಅದೇ ಮಾದರಿಯಲ್ಲೇ ಐಫೋನ್​ 11 ಸಹ ಇರಲಿದೆ. ಐಫೋನ್ 11 ಮಾಡೆಲ್​ನಲ್ಲಿ ಸ್ಕ್ವೇರ್ ಕ್ಯಾಮರಾ ಇರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ನಾಳೆ ಆ ಸುದ್ದಿಗೆ ಸ್ಪಷ್ಟತೆ ದೊರೆಯಲಿದೆ. ಐಫೋನ್​ 11ನಲ್ಲಿ ವೈಡ್​-ಆ್ಯಂಗಲ್ ಸೆನ್ಸಾರ್ ಸೇರಿದಂತೆ ಮೂರು ವಿಶೇಷ ಸೆನ್ಸಾರ್​ಗಳಿವೆ. ಕಡಿಮೆ ಬೆಳಕಿನ ಫೋಟೋಗಳಿಗೆ ಐಫೋನ್​ 11 ಅತ್ಯುತ್ತಮ ಆಯ್ಕೆ. ಐಫೋನ್​ 11ಪ್ರೋ 5.8 ಇಂಚು OLED ಡಿಸ್ಲೇ ಇರಲಿದ್ದು, 512 ಜಿಬಿ ಆಂತರಿಕ ಸಾಮರ್ಥ್ಯ ಹೊಂದಿದೆ. ಇದೇ ಮಾದರಿಯಲ್ಲಿ 6.5 ಡಿಸ್ಪ್ಲೇ ಇರುವ ಮೊಬೈಲ್ ಸಹ ಲಭ್ಯವಿರಲಿದೆ. 3,500mAh ಬ್ಯಾಟರಿ ಸಾಮರ್ಥ್ಯವಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا