Urdu   /   English   /   Nawayathi

ಮುಸ್ಲಿಂ ಸಮುದಾಯವಿಲ್ಲದ ಈ ಗ್ರಾಮದ ಮಸೀದಿಯಲ್ಲಿ ಹಿಂದೂಗಳಿಂದಲೇ ನಮಾಜ್!

share with us

ನಳಂದಾ: 08 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜನ ಜಾತಿ ಧರ್ಮದ ಹೆಸರಿನಲ್ಲಿ ಹೊಡೆದಾಡಿಕೊಳ್ಳುವ ಇಂಥ ದಿನಮಾನಗಳಲ್ಲಿ ಬಿಹಾರದ ನಳಂದಾ ಜಿಲ್ಲೆಯಲ್ಲಿರುವ ಮಾಂಡಿ ಗ್ರಾಮ ಲೋಕಕ್ಕೆ ಭಾವೈಕ್ಯತೆಯ ಸಂದೇಶ ಸಾರುತ್ತಿದೆ. ಮುಸ್ಲಿಂ ಸಮುದಾಯವಿಲ್ಲದ ಈ ಗ್ರಾಮದಲ್ಲಿ 2 ಶತಮಾನದಷ್ಟು ಹಳೆಯ ಮಸೀದಿ ಇದೆ. ಮಸೀದಿಯನ್ನು ಸ್ವಚ್ಚಗೊಳಿಸುವುದ್ರಿಂದ ಹಿಡಿದು ನಮಾಜ್ ಮಾಡುವ ಕೆಲಸವನ್ನು ಹಿಂದೂಗಳೇ ಮಾಡುತ್ತಾ ಬರ್ತಿದ್ದಾರೆ.

Hindus maintain 200 year old mosque, offer namaz

200 ವರ್ಷ ಹಳೆಯ ಮಸೀದಿ

ಗ್ರಾಮದಿಂದಲೇ ವಲಸೆ ಹೋದ ಮುಸ್ಲಿಮರು:
ಒಂದು ಕಾಲದಲ್ಲಿ ಈ ಮಾಂಡಿ ಗ್ರಾಮದಲ್ಲಿ ಹಲವು ಮುಸ್ಲಿಂ ಕುಟುಂಬಗಳು ವಾಸವಿದ್ದವಂತೆ. ಆದ್ರೆ ದಿನಕಳೆದಂತೆ ಇವರೆಲ್ಲರೂ ಗ್ರಾಮ ತೊರೆದು ಬೇರೆಡೆ ವಲಸೆ ಹೋಗಿದ್ದರಿಂದ ಮಸೀದಿ ನೋಡಿಕೊಳ್ಳುವ ಜವಾಬ್ದಾರಿಯನ್ನ ಹಿಂದೂಗಳೇ ವಹಿಸಿಕೊಂಡಿದ್ದಾರೆ.

Hindus maintain 200 year old mosque, offer namaz

ಹಿಂದೂಗಳಿಂದ ಮಸೀದಿ ಸ್ವಚ್ಛತೆ

ಗ್ರಾಮದ ಬಖೋರಿ ಜಮದಾರ್, ಗೌತಮ್ ಪ್ರಸಾದ್ ಮತ್ತು ಅಜಯ್ ಪಾಸ್ವಾನ್ ಎಂಬುವವರು ಒಟ್ಟಾಗಿ ಮಸೀದಿಯನ್ನು ನೋಡಿಕೊಳ್ಳುತ್ತಿದ್ದಾರೆ. ಮಸೀದಿಯ ಸ್ವಚ್ಚತೆ, ದುರಸ್ತಿ ಸೇರಿದಂತೆ ಪ್ರತಿಯೊಂದು ಕೆಲಸವನ್ನೂ ಇವರೇ ನೋಡಿಕೊಳ್ಳುತ್ತಾರೆ. ಹಿಂದೂ ಧರ್ಮದ ಜನರು ಆಜಾನ್ (ನಮಾಜ್‌ಗೆ ಮುಂಚಿತವಾಗಿ ಮೈಕ್‌ಗಳಲ್ಲಿ ಕರೆಯುವುದು) ಕಲಿತಿಲ್ಲ. ಇದಕ್ಕೆ ಪರಿಹಾರ ಕಂಡುಕೊಂಡ ಇವರು ರೆಕಾರ್ಡ್ ಮಾಡಲಾದ ಆಜಾನನ್ನು ಪ್ರತೀ ದಿನ 5 ಬಾರಿ ಪ್ಲೇ ಮಾಡುತ್ತಾರೆ. ಸುಮಾರು ಎರಡು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಇರುವವರೆಲ್ಲ ಹಿಂದೂಗಳೇ. ಸುಮಾರು 200 ವರ್ಷಗಳ ಹಿಂದೆ ಮುಸ್ಲಿಂ ಸಮುದಾಯ ವಾಸವಿದ್ದಾಗ ಈ ಮಸೀದಿಯನ್ನ ನಿರ್ಮಿಸಲಾಗಿತ್ತು ಎಂದು ಸ್ಥಳಿಯರು ಹೇಳಿದ್ದಾರೆ. ಇನ್ನು ಈ ಗ್ರಾಮದಲ್ಲಿ ಯಾವುದೇ ಶುಭಕಾರ್ಯಗಳು ನಡೆದರೆ ಈ ಮಸೀದಿಗೆ ಹೋಗಿ ಮೊದಲು ಪ್ರಾರ್ಥನೆ ಸಲ್ಲಿಸಲಾಗುತ್ತದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا