Urdu   /   English   /   Nawayathi

ಸೇಡಿನ ರಾಜಕಾರಣ ಬದಿಗಿಡಿ, ಅರ್ಥ ವ್ಯವಸ್ಥೆ ಕಡೆ ಗಮನ ಕೊಡಿ: ಮೋದಿಗೆ ಡಾ. ಸಿಂಗ್​ ಸಲಹೆ

share with us

ಜೈಪುರ(ರಾಜಸ್ಥಾನ): 08 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಆರ್ಥಿಕ ಕುಸಿತಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು ಕೇಂದ್ರ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. "ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಉತ್ತಮವಾಗಿ ರೂಪಿಸಲಾದ ರಾಷ್ಟ್ರೀಯ ಕಾರ್ಯತಂತ್ರಗಳು ಅಳವಡಿಸಿಕೊಳ್ಳುವ ಅಗತ್ಯವಿದೆ'' ಎಂದು ಅವರು ಪ್ರತಿಪಾದಿಸಿದ್ದಾರೆ. ಲಕ್ಷ್ಮಿಪತ್​ ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ಅವರು, ಪ್ರಸ್ತುತ ದೇಶದ ಆರ್ಥಿಕ ಎಂಜಿನ್​ ನಿಧಾನವಾಗಿ ಸಾಗುತ್ತಿದೆ. ಜಿಡಿಪಿಯ ಬೆಳವಣಿಗೆ ಭಾರಿ ಕುಸಿತ ಕಂಡಿದೆ. ಹೂಡಿಕೆ ಪ್ರಮಾಣ ನಿಶ್ಚಲವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ ಹಾಗೂ ನಿರುದ್ಯೋಗದ ಪ್ರಮಾಣ ಸಹ ಹೆಚ್ಚಾಗುತ್ತಿದೆ. ಭಾರತವನ್ನು 5 ಟ್ರಿಲಿಯನ್ ಡಾಲರ್​ ಆರ್ಥಿಕತೆಯನ್ನಾಗಿಸಲು ನಮಗೆ ಉತ್ತಮ ಕಲ್ಪನೆಯ ರಾಷ್ಟ್ರೀಯ ತಂತ್ರಬೇಕು ಎಂದು ಸಲಹೆ ನೀಡಿದ್ದಾರೆ. ಇಂದಿನ ಆರ್ಥಿಕತೆಯ ಸ್ಥಿತಿ ತೀವ್ರವಾಗಿ ಚಿಂತಿಸುವಂತೆ ಮಾಡುತ್ತಿದೆ. ಕಳೆದ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ಶೇ. 5ರಷ್ಟು ದರವು ಸುದೀರ್ಘ ಮಂದಗತಿಯ ಮಧ್ಯದಲ್ಲಿದ್ದೇವೆ ಎಂಬದನ್ನು ಸೂಚಿಸುತ್ತಿದೆ. ಭಾರತವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮೋದಿ ಸರ್ಕಾರದ ಸರ್ವಾಂಗೀಣ ದುರುಪಯೋಗವು ಈ ವೇಗಕ್ಕೆ ಕಡಿವಾಣ ಹಾಕಿದೆ ಎಂದು ಮನಮೋಹನ್​ ಸಿಂಗ್​ ಆರೋಪಿಸಿದ್ದಾರೆ. ಇನ್ನು, ನಮ್ಮ ಯುವಕರು, ರೈತರು ಮತ್ತು ಕೃಷಿ ಕೆಲಸಗಾರರು, ಉದ್ಯಮಿಗಳು ಹಾಗೂ ಕೆಳ ವರ್ಗಗಳು ಉತ್ತಮವಾಗಿದ್ದು, ಅರ್ಹತಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಸೇಡಿನ ರಾಜಕೀಯವನ್ನು ಬದಿಗಿಟ್ಟು, ವಿವೇಕದ ಎಲ್ಲ ಧ್ವನಿಗಳನ್ನು ಮತ್ತು ಆಲೋಚನಾ ಮನಸ್ಸುಗಳನ್ನು ತಲುಪಲು ಸರ್ಕಾರ ಮುಂದಾಗಬೇಕು ಎಂಬುದು ನನ್ನ ಕೋರಿಕೆ. ಈ ಮಾನವ ನಿರ್ಮಿತ ಬಿಕ್ಕಟ್ಟಿಗಳಿಂದ ನಮ್ಮ ಆರ್ಥಿಕತೆಯನ್ನು ದೂರವಿಡಿ ಎಂದು ಮಾಜಿ ಪ್ರಧಾನಿ ಕೇಂದ್ರಕ್ಕೆ ಕಿವಿಮಾತು ಹೇಳಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا