Urdu   /   English   /   Nawayathi

ಸಿಎಂ ಕಮಲ್‌ ವಿರುದ್ಧ ಸಿಡಿದೆದ್ದ ಸಿಂಧಿಯಾ

share with us

ಭೋಪಾಲ: 05 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ತಮ್ಮ ಸಚಿವ ಸಂಪುಟದ ಸದಸ್ಯರ ಮಾತುಗಳನ್ನು ಮೊದಲು ಕೇಳಬೇಕು. ಅನಂತರ, ಪಕ್ಷದ ಇತರ ನಾಯಕರ ಮಾತುಗಳನ್ನು ಕೇಳಬೇಕು ಎಂದು ಪಕ್ಷದ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಮೂಲಕ ಸರಕಾರ ಸುಗಮವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಮಾಜಿ ಸಿಎಂ ದಿಗ್ವಿಜಯ ಸಿಂಗ್‌ ವಿರುದ್ಧ ಅರಣ್ಯ ಸಚಿವ ಉಮಂಗ್‌ ಸಿಂಘರ್‌ ಮಾಡಿದ್ದ ಆರೋಪಗಳಿಗೆ ಬೆಂಬಲ ನೀಡಿದ್ದಾರೆ. ಎರಡು ಕಡೆಯವರ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಆಲಿಸಬೇಕು. 15 ವರ್ಷಗಳ ಬಳಿಕ ರಾಜ್ಯದಲ್ಲಿ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅದಕ್ಕಾಗಿ ಪಕ್ಷದ ಕಾರ್ಯ ಕರ್ತರು ಅವಿಶ್ರಾಂತವಾಗಿ ದುಡಿದಿದ್ದಾರೆ. ಈಗ ಕೇವಲ 6 ತಿಂಗಳಷ್ಟೇ ಪೂರ್ತಿಯಾಗಿದೆ ಎಂದು ಅವರು ಹೇಳಿದ್ದಾರೆ.

ಶೈಲ್ಜಾ ನೇಮಕ: ವಿಧಾನಸಭೆ ಚುನಾವಣೆ ನಡೆಯಲಿರುವ ಹರ್ಯಾಣದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಮಾಜಿ ಸಚಿವೆ ಕುಮಾರಿ ಶೈಲ್ಜಾರನ್ನು ನೇಮಿಸಲಾಗಿದೆ. ಮಾಜಿ ಸಿಎಂ ಭೂಪಿಂದರ್‌ ಸಿಂಗ್‌ ಹೂಡಾರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا