Urdu   /   English   /   Nawayathi

ಬ್ರಿಟನ್​ ಸ್ಟೀಲ್​ ಘಟಕದಿಂದ 400 ನೌಕರರಿಗೆ ಕೊಕ್​​​ ನೀಡಿದ ಟಾಟಾ ಸಂಸ್ಥೆ

share with us

ಲಂಡನ್​: 03 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಐರೋಪ್ಯ ಸ್ಟೀಲ್ ಉದ್ಯಮದಲ್ಲಿ ಹಲವು ಸವಾಲುಗಳ ಕಂಡುಬರುತ್ತಿದ್ದು, ಬ್ರಿಟನ್​ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ವಿಭಾಗದಿಂದ 400ಕ್ಕೂ ಅಧಿಕ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಲಾಗುತ್ತಿದೆ ಎಂದು ಟಾಟಾ ಸ್ಟೀಲ್ ತಿಳಿಸಿದೆ. ಐರೋಪ್ಯ ಒಕ್ಕೂಟದ ಎರಡು ಅತಿ ದೊಡ್ಡ ಆರ್ಥಿಕ ರಾಷ್ಟ್ರಗಳಾದ ಬ್ರಿಟನ್ ಮತ್ತು ಜರ್ಮನಿಗೆ ಆರ್ಥಿಕ ಹಿಂಜರಿತದ ಬಿಸಿ ಈಗಾಗಲೇ ತಟ್ಟಿದೆ. ಈ ಬೆಳವಣಿಗೆಯು ಋಣಾತ್ಮಕ ಹಾದಿಗೆ ಕೊಂಡೊಯ್ಯುತ್ತಿದೆ ಎಂದು ಅದು ಸ್ಪಷ್ಟನೆ ನೀಡಿದೆ. ರೆಗ್ಯುಲೇಟರಿ ಫೈಲಿಂಗ್​ನಲ್ಲಿ (ಯುರೋಪಿಯನ್​ ಒಕ್ಕೂಟ್ಟದ ನಿಯಮಗಳು) 'ಆರ್ಬ್ ಎಲೆಕ್ಟ್ರಿಕಲ್ ಸ್ಟೀಲ್ಸ್‌' ಘಟಕವನ್ನು ಮುಂದೆ ತೆಗೆದುಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ, 380 ಉದ್ಯೋಗಗಳನ್ನು ಸೇವೆಯಿಂದ ತೆಗೆದು ಸ್ಟೀಲ್ಸ್​ ಸೈಟ್​ ಅನ್ನು ಮುಚ್ಚುವ ಪ್ರಸ್ತಾಪವಿದೆ ಎಂದು ಕಂಪನಿ ಹೇಳಿದೆ. ಇದಲ್ಲದೆ ಬ್ರಿಟನ್‌ನ ವೊಲ್ವರ್‌ಹ್ಯಾಂಪ್ಟನ್ ಎಂಜಿನಿಯರಿಂಗ್ ಸ್ಟೀಲ್ಸ್ ಸೇವಾ ಕೇಂದ್ರಕ್ಕೂ ಖರೀದಿದಾರರನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೆಂದು ಟಾಟಾ ಸ್ಟೀಲ್, 'ಅದು ಕೂಡ ಮುಚ್ಚುವ ಪ್ರಸ್ತಾಪ'ದಲ್ಲಿದೆ. ಬೋಲ್ಟನ್‌ನಲ್ಲಿನ ಮಾರಾಟ ಕಚೇರಿ ಸೇರಿದಂತೆ 26 ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا