Urdu   /   English   /   Nawayathi

ಅಸ್ಸಾಂ: ಎನ್ ಆರ್ ಸಿ ಅಂತಿಮ ಪಟ್ಟಿಯಿಂದ ಶಾಸಕ ಅನಂತ ಕುಮಾರ್ ಮಾಲೋ ಪುತ್ರನ ಹೆಸರೇ ನಾಪತ್ತೆ!

share with us

ಗುವಾಹಟಿ: 01 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ಜನಸಾಮಾನ್ಯರು ಮಾತ್ರವಲ್ಲ, ಅಸ್ಸಾಂ ಶಾಸಕ ಅನಂತ ಕುಮಾರ್ ಮಾಲೋ ಅವರ ಪುತ್ರ ಹೆಸರು ಕೂಡಾ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಅಂತಿಮ ಪಟ್ಟಿಯಿಂದ ನಾಪತ್ತೆಯಾಗಿದೆ. ಅನಂತ್ ಕುಮಾರ್ ಮಾಲೋ  ಪ್ರತಿಪಕ್ಷ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ನ ಹಾಲಿ ಶಾಸಕರಾಗಿದ್ದಾರೆ. ಇವರ ಮಗ ಅಲ್ಲದೇ ಕಾಂಗ್ರೆಸ್ ಶಾಸಕ ಇಲಿಯಾಸ್ ಆಲಿಯ ಅವರ ಪುತ್ರಿಯ ಹೆಸರನ್ನು ಕೂಡಾ ಪಟ್ಟಿಯಿಂದ ಕೈ ಬಿಡಲಾಗಿದೆ. ಆದರೆ ಈ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಜಿ ಎಐಯುಡಿಎಫ್ ಶಾಸಕ ಅಟೌರ್ ರೆಹಮಾನ್ ಅವರ ನಾಲ್ಕು ಹೆಣ್ಣುಮಕ್ಕಳಲ್ಲಿ ಮೂವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇನ್ನೋರ್ವ ಪುತ್ರಿ ಹಾಗೂ ಗಂಡುಮಗನ ಹೆಸರನ್ನು ಕೈ ಬಿಡಲಾಗಿದೆ. ಇದು ಅಕ್ರಮವಾಗಿದೆ. ಈ ರೀತಿಯಲ್ಲಿ ಕುಟುಂಬವನ್ನು ಯಾವುದೇ ದೇಶದಲ್ಲೂ ಮಾಡುವುದಿಲ್ಲ ಎಂದು ದಕ್ಷಿಣ ಏಷ್ಯಾದ ಬಾದರ್ ಪುರದ ಮಜ್ಹಾರ್ ಭೂಯನ್ ಹೇಳಿದ್ದಾರೆ. ಇದೇ ರೀತಿಯಲ್ಲಿ ಸೇನೆಯ ನಿವೃತ್ತ ಕ್ಯಾಪ್ಟನ್ ಮತ್ತು ವಿದೇಶಿ ಎಂದು ಘೋಷಿಸಿಕೊಂಡಿರುವ ಎಂಡಿ ಸನಾವುಲ್ಲಾ ಅವರನ್ನು ಹೆಸರನ್ನು ಕೂಡಾ ಪಟ್ಟಿಯಿಂದ ಕೈಬಿಡಲಾಗಿದೆ. ಯಾವುದೇ ವಿದೇಶಿಯರನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಎನ್ ಆರ್ ಸಿ ಪ್ರಾಧಿಕಾರ ಹೇಳಿಕೆ ನೀಡಿದೆ.  ವಿವಿಧ ಬಂಧನ ಶಿಬಿರಗಳಲ್ಲಿ ದಾಖಲಾದ 1,145 ವಿದೇಶಿಯರಲ್ಲಿ, ಕಳೆದ ಎರಡು ವಾರಗಳಲ್ಲಿ ಸುಮಾರು ಒಂದು ಡಜನ್ ಜನರನ್ನು ಷರತ್ತುಬದ್ಧವಾಗಿ ಬಿಡುಗಡೆ ಮಾಡಲಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا