Urdu   /   English   /   Nawayathi

ಅಪಘಾತದಲ್ಲಿ ಮೃತಪಟ್ಟ ಭಟ್ಕಳದ ಸಿಟಿಲೈಟ್ ಹೋಟೇಲ್ ಉದ್ಯಮಿ

share with us

ಭಟ್ಕಳ: 31 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಭಟ್ಕಳದಲ್ಲಿ ಸಿಟಿ ಲೈಟ್ ಹೋಟೇಲಿನ ಮಾಲಿಕ ಇಂದು ಬೆಳಿಗ್ಗೆ ಸುಮಾರು 10ಗಂಟೆಗೆ ಬೈಂದೂರಿನ ನಾಯಕನಕಟ್ಟೆಯ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟ ನೂರುಲ್ ಅಮೀನ್ ಮುಲ್ಲಾ(48) ಭಟ್ಕಳದಲ್ಲಿ ಸುಮಾರು 25 ವರ್ಷಗಳಿಂದ ತಮ್ಮ  ಹೋಟೇಲ್ ನಡೆಸುತ್ತಿದ್ದು, ಶುಕ್ರವಾರದಂದು ರಾತ್ರಿ ತನ್ನ ಸಹೋದರನಿಗೆ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಟ್ಟು ಭಟ್ಕಳಕ್ಕೆ ಮರಳುತ್ತಿರುವ ವೇಳೆ ದಾರಿ ಮಧ್ಯದಲ್ಲಿ ಬೈಂದೂರಿನ ಬಳಿ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಅಪಘಾತದ ಬಳಿಕ ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಪ್ರಕರಣ ಬೈಂದೂರಿನ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
 

Prayer Timings

Fajr فجر
Dhuhr الظهر
Asr أسر
Maghrib مغرب
Isha عشا