Urdu   /   English   /   Nawayathi

ಗುಂಪು ಹಲ್ಲೆ: ಪಶ್ಚಿಮ ಬಂಗಾಳ ಸರ್ಕಾರದಿಂದ ಮಸೂದೆ

share with us

ಕೊಲ್ಕತ್ತ: 31 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಗುಂಪು ಹಲ್ಲೆ ತಡೆಯಲು ಹೊಸ ಮಸೂದೆಯನ್ನು ಪಶ್ಚಿಮ ಬಂಗಾಳ ಸರ್ಕಾರ ರೂಪಿಸಿದೆ. ಮಸೂದೆಯನ್ನು ವಿಧಾನಸಭೆ ಶುಕ್ರವಾರ ಅಂಗೀಕರಿಸಿದೆ. ಪಶ್ಚಿಮ ಬಂಗಾಳ ‘ಗುಂಪು ಹಲ್ಲೆಯ ವಿರುದ್ಧ ರಕ್ಷಣೆ ಮಸೂದೆ 2019’ಕ್ಕೆ ವಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಸಿಪಿಐ(ಎಂ) ಬೆಂಬಲ ನೀಡಿದವು. ಪ್ರಮುಖ ವಿಪಕ್ಷವಾಗಿರುವ ಬಿಜೆಪಿಯು ಮಸೂದೆಗೆ ಬೆಂಬಲವನ್ನಾಗಲೀ ವಿರೋಧವನ್ನಾಗಲೀ ವ್ಯಕ್ತಪಡಿಸಲಿಲ್ಲ; ಆದರೆ ಈ ಮಸೂದೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಮಸೂದೆ ಕುರಿತು ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಗುಂಪು ಹಲ್ಲೆ ಸಾಮಾಜಿಕ ಪಿಡುಗಾಗಿದ್ದು, ಈ ಪಿಡುಗಿನ ವಿರುದ್ಧ ಎಲ್ಲರೂ ಜತೆಯಾಗಿ ಹೋರಾಡಬೇಕಿದೆ. ಗುಂಪು ಹಲ್ಲೆ ತಡೆಗೆ ಸೂಕ್ತ ಕಾನೂನು ರಚಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದೆ. ಸೂಕ್ತ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕಿತ್ತು. ಆದರೆ ಇಲ್ಲಿಯವರೆಗೂ ಕಾನೂನು ರಚಿಸದೇ ಇರುವ ಕಾರಣ ರಾಜ್ಯ ಸರ್ಕಾರವೇ ಮಸೂದೆ ತಂದಿದೆ. ಇಂತಹ ಪ್ರಕರಣಗಳ ಕಡಿವಾಣಕ್ಕೆ ಜಾಗೃತಿ ಅಗತ್ಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا