Urdu   /   English   /   Nawayathi

34 ವರ್ಷಗಳ ಬಳಿಕ ಅಸ್ಸಾಂ ನಾಗರಿಕರಿಗೆ ನವೀಕರಿಸಿದ ಎನ್ ಆರ್ ಸಿ

share with us

ಗುವಾಹಟಿ: 31 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕೊನೆಗೂ ಅಸ್ಸಾಂ ನಾಗರಿಕರಿಗೆ ಸಂಕಷ್ಟದಿಂದ ಮುಕ್ತಿ ಸಿಗುವ ಸಮಯ ಬಂದಿದೆ. ಸತತ 34 ವರ್ಷಗಳ ಕಾಯುವಿಕೆ ನಂತರ ಶನಿವಾರ ಅಸ್ಸಾಂ ರಾಜ್ಯದ ಜನರಿಗೆ ನವೀಕರಿಸಿದ ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ಆರ್ ಸಿ) ಸಿಗಲಿದೆ. ಇದಕ್ಕಾಗಿ ಆರು ವರ್ಷಗಳಿಗಿಂತಲೂ ಅಧಿಕ ಕಾಲ ಅಧಿಕಾರಿಗಳು ಕೆಲಸ ಮಾಡಿದ್ದಾರೆ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ವಿದ್ಯಾರ್ಥಿ ಸಂಘಟನೆ(ಎಎಎಸ್ ಯು) ಮಧ್ಯೆ ಒಪ್ಪಂದವಾಗಿತ್ತು. ಎನ್ಆರ್ ಸಿ 1951ನ್ನು ಪರಿಷ್ಕೃತಗೊಳಿಸಬೇಕಾಗಿತ್ತು. ಬಾಂಗ್ಲಾದೇಶದಿಂದ ವಲಸಿಗರು ಅಕ್ರಮವಾಗಿ ಅಸ್ಸಾಂ ಪ್ರವೇಶಿಸುತ್ತಿದ್ದಾರೆ ಎಂದು ನವೀಕರಿಸಲು ಒತ್ತಾಯಪಡಿಸಲಾಗುತ್ತಿತ್ತು. ವಿದೇಶಿಗರು ಅಕ್ರಮವಾಗಿ ವಲಸೆ ಬಂದು ಇಲ್ಲಿ ನೆಲೆಸಿದರೆ ಅಸ್ಸಾಂ ನ ಸಂಸ್ಕೃತಿ, ಭೌಗೋಳಿಕತೆ, ನಾಗರಿಕತೆ, ಇಲ್ಲಿನ ಜನರ ಅಭಿವೃದ್ಧಿ ಮೇಲೆ ಪೆಟ್ಟು ಬೀಳುತ್ತದೆ ಎಂದು ವಿದೇಶಿಗರ ವಿರೋಧಿ ಪ್ರತಿಭಟನೆಯೇ ಅಸ್ಸಾಂನಲ್ಲಿ ಆರಂಭವಾಯಿತು. ಈ ಮೂಲಕ ಮುಂದಿನ ದಿನಗಳಲ್ಲಿ ಅಸೊಮ್ ಗಾನ ಪರಿಶತ್ ಎಂಬ ಪಕ್ಷ ಹುಟ್ಟಿಕೊಂಡಿತು. ಅಸ್ಸಾಂನಲ್ಲಿ ವಲಸಿಗರ ಸಮಸ್ಯೆಯನ್ನು ಬಗೆಹರಿಸುವುದಾಗಿ ಜನರಿಗೆ ಭರವಸೆ ನೀಡುತ್ತಾ ಎರಡು ಬಾರಿ ಅಧಿಕಾರಕ್ಕೆ ಬಂತು, ಆದರೆ ಸಮಸ್ಯೆ ಹಾಗೆಯೇ ಉಳಿಯಿತು. ಎನ್ಆರ್ ಸಿಯನ್ನು ನವೀಕರಿಸಬೇಕೆಂಬುದು ಅಸ್ಸಾಮೀಯರ ಬಹುಕಾಲದ ಬೇಡಿಕೆಯಾಗಿದೆ. ಏಕೆಂದರೆ ನಾಗರಿಕರ ದಾಖಲಾತಿ ಪರಿಷ್ಕರಿಸಿದರೆ ಮಾತ್ರ ಅಕ್ರಮ ವಲಸಿಗರನ್ನು ಗುರುತಿಸಿ ಅವರನ್ನು ಗಡೀಪಾರು ಮಾಡಲು ಸಾಧ್ಯ. ದಾಖಲಾತಿಗಳನ್ನು ನವೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ 2013ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆಗ ಅಸ್ಸಾಂ ನಾಗರಿಕರಿಗೆ ನಿರಾಳತೆಯ ಭಾವ ಉಂಟಾಗಿದ್ದು ಸುಳ್ಳಲ್ಲ.

ಇಂದು ಎನ್ ಆರ್ ಸಿಯ ನವೀಕೃತ ವರದಿ ಪ್ರಕಟವಾಗುತ್ತಿರುವುದು ಸಹಜವಾಗಿ ವಲಸಿಗರಲ್ಲಿ ನಡುಕ ಹುಟ್ಟಿಸಿದೆ. ಮುಖ್ಯವಾಗಿ ಬಂಗ್ಲಾದೇಶದ ಹಿಂದೂಗಳು ಮತ್ತು ಮುಸ್ಲಿಮರಿಗೆ. ವರದಿ ಸದ್ಯ ತಪಾಸಣೆ ಹಂತದಲ್ಲಿದೆ. ದಾಖಲಾತಿಯಲ್ಲಿ ಹೆಸರು ಇಲ್ಲದಿರುವವರನ್ನು ಕೂಡಲೇ ಬಂಧಿಸುವುದಿಲ್ಲ, ಅವರಿಗೆ ಕಾನೂನು ರೀತಿ ಪ್ರಕಾರ ವಿದೇಶಿ ನ್ಯಾಯಾಧೀಕರಣದಲ್ಲಿ ಹೋರಾಡಲು ಸಮಯಾವಕಾಶ ನೀಡಲಾಗುವುದು ಎಂದು ಅಸ್ಸಾಂ ಸರ್ಕಾರ ಹೇಳಿದೆ. ಇಂದು ಎನ್ ಆರ್ ಸಿ ಪ್ರಕಟವಾದ ನಂತರ ಹಿಂಸಾತ್ಮಕ ಘಟನೆಗಳು ನಡೆಯುವ ಸಾಧ್ಯತೆಯಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ರಾಜ್ಯ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡಲು ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುದ್ದಿಗಾರರಿಗೆ ರಾಜ್ಯ ಪೊಲೀಸ್ ನಿರ್ದೇಶಕ ಕುಲದ್ಹರ್ ಸೈಕಿಯಾ ತಿಳಿಸಿದರು. ಆರು ವರ್ಷಗಳ ನಾಗರಿಕರ ನವೀಕೃತ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು 60 ಮಿಲಿಯನ್ ಗಿಂತಲೂ ಅಧಿಕ ದಾಖಲೆಗಳನ್ನು ಪರಿಶೀಲಿಸಿದ್ದಾರೆ. 3.29 ಕೋಟಿಗೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದರು.ಅಧಿಕಾರಿಗಳು ರಾಜ್ಯಾದ್ಯಂತ 2,500 ಎನ್ ಆರ್ ಸಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಈ ಮೂಲಕ ದಾಖಲೆಗಳನ್ನು ಮರು ಪರಿಶೀಲಿಸಬಹುದಾಗಿತ್ತು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا