Urdu   /   English   /   Nawayathi

ಜವಾಬ್ದಾರಿಯುತ ಸವಾರರಿಗೆ ಪಿವಿಆರ್​ ಗೋಲ್ಡ್​ ಕ್ಲಾಸ್​ ಟಿಕೆಟ್​ ಕೊಟ್ಟ ಟ್ರಾಫಿಕ್​ ಪೊಲೀಸರು

share with us

ಹೈದರಾಬಾದ್​: 28 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಟ್ರಾಫಿಕ್​ ಪೊಲೀಸರೆಂದರೆ ಹೆದರಿ ಡ್ರೈವ್​ ಮಾಡುವವರೇ ಹೆಚ್ಚು. ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೈದರಾಬಾದ್​ ಸಂಚಾರ ಪೊಲೀಸ್​ ಇಲಾಖೆಯು ಹೊಸ ದಾರಿಯೊಂದನ್ನು ಕಂಡುಕೊಂಡಿದೆ.

ಹೆಲ್ಮೆಟ್​ ಧರಿಸಿ ಸಂಚಾರ ಮಾಡುವ ವಾಹನ ಸವಾರರಿಗೆ ಪಿವಿಆರ್​ ಗೋಲ್ಡ್​ ಕ್ಲಾಸ್​ ಟಿಕೆಟ್​ ನೀಡುವ ಮೂಲಕ ಅವರನ್ನು ಗೌರವಿಸಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ, ವಾಹನ ದಾಖಲೆ, ಡಿಎಲ್​ ಎಲ್ಲವನ್ನೂ ಸರಿಯಾಗಿ ನಿರ್ವಹಿಸಿರುವ ವಾಹನ ಸವಾರರನ್ನು ಗುರುತಿಸಿ ಅವರಿಗೆ ಟಿಕೆಟ್​ಗಳನ್ನು ನೀಡಲಾಗಿದೆ. ಸಂಚಾರ ಪೊಲೀಸರ ಈ ಕ್ರಮದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಟ್ವಿಟರ್​ನಲ್ಲೂ ಈ ಕುರಿತು ಚರ್ಚೆ ನಡೆಯುತ್ತಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا