Urdu   /   English   /   Nawayathi

ತಾಳಿ ಕಟ್ಟುವ ಕೈಯಿಂದಲೇ ಪ್ರಿಯತಮೆಯ ಕೊಲೆ; ಹಾಯಾಗಿ ಹಾಸ್ಟೆಲ್​ನಲ್ಲಿ ಕಾಲ ಕಳೆದ ಲವರ್​!

share with us

ಖಮ್ಮಂ: 27 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಆಕೆ ಮದುವೆಗೂ ಮುನ್ನವೇ ತನ್ನ ಪ್ರಿಯಕರನ​ ಜೊತೆ ನೂರೊಂದು ಕನಸುಗಳನ್ನು ಕಂಡಿದ್ದಳು. ಆದ್ರೆ, ಆ ಕನಸುಗಳು ಆಕೆಯ ಕೊಲೆಯಲ್ಲಿ ಕಮರಿಹೋಗಿವೆ. ಪೆನುಬಲ್ಲಿ ತಾಲೂಕಿನ ಕುಪ್ಪಿನಕುಂಟ್ಲದ ಕಾವಿಟಿ ತೇಜಸ್ವಿನಿ (20) ಮತ್ತು ಸತ್ತುಪಲ್ಲಿ ಗ್ರಾಮದ ನೀತಿನ್​ ಕಾಲೇಜು​ ವಿದ್ಯಾಭ್ಯಾಸದ ಸಮಯದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಪಾಲಿಟೆಕ್ನಿಕಲ್​ ಓದುತ್ತಿದ್ದ ತೇಜಸ್ವಿನಿಯ ಕೆಲ ವಿಷಯಗಳು ಉಳಿದುಕೊಂಡಿದ್ದರಿಂದ​ ಆಕೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಳು. ಇನ್ನು ನಿತಿನ್​ ಬಿಟೆಕ್​ ವ್ಯಾಸಂಗ ಮಾಡುತ್ತಿದ್ದಾನೆ. ಆದ್ರೆ, ಇಬ್ಬರು ಮದುವೆಯಾಗಿ ಸುಖ ಸಂಸಾರ ನಡೆಸುವ ಕನಸು ಕಂಡಿದ್ದರು. ಆದ್ರೆ, ತಾಳಿ ಕಟ್ಟಬೇಕಾಗಿದ್ದ ಕೈಗಳೇ ಪ್ರೇಮಿಯನ್ನು ಕೊಲೆ ಮಾಡಿವೆ. ಭಾನುವಾರ ಮನೆಯಲ್ಲಿ ಯಾರಿಗೂ ತಿಳಿಯದಂತೆ ವಾಯುವಿವಾರಕ್ಕೆಂದು ನಿತಿನ್​ ಬೈಕ್‌ನಲ್ಲಿ ಕುಳಿತುಕೊಂಡು ತೇಜಸ್ವಿನಿ ಹೋಗಿದ್ದಾಳೆ. ನಿತಿನ್​ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ತನ್ನ ಕೈವಸ್ತ್ರದಿಂದ ಕತ್ತನ್ನು ಬಿಗಿಯಾಗಿ ಹಿಡಿದು ಕೊಲೆ ಮಾಡಿದ್ದಾನೆ. ಬಳಿಕ ಏನೂ ಅರಿಯದ ರೀತಿ ಹಾಸ್ಟೆಲ್​ಗೆ ತೆರಳಿದ್ದಾನೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಸೋಮವಾರ ನನ್ನ ಮಗಳು ನಾಪತ್ತೆಯಾಗಿದ್ದಾಳೆಂದು ತೇಜಸ್ವಿನಿ ಪೋಷಕರು ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ತೇಜಸ್ವಿನಿ ಮೊಬೈಲ್​ ಕಾಲ್​ ರೆಕಾರ್ಡ್​ ಲಿಸ್ಟ್​ ತೆಗೆದಿದ್ದಾರೆ. ಲಾಸ್ಟ್​ ಕಾಲ್​ ನಿತಿನ್‌ಗೆ ಹೋಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ನಿತಿನ್‌ನನ್ನು ಫೋನ್​ ಮೂಲಕ ಪತ್ತೆ ಹಚ್ಚಿದ್ದಾಗ ಆತ ಹಾಸ್ಟೆಲ್​ನಲ್ಲಿರುವುದು ತಿಳಿದಿದೆ. ಕೂಡಲೇ ಹಾಸ್ಟೆಲ್‌ಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಗಳನ್ನು ಕಳೆದುಕೊಂಡ ಕುಟಂಬದ ಆಕ್ರಂದನ ಮನ ಕಲುಕವಂತಿತ್ತು. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا