Urdu   /   English   /   Nawayathi

ಶ್​...! ಕೋರಿಯರ್​ ಪಾರ್ಸೆಲ್​ ತೆರೆಯುವ ಮುನ್ನ ಈ ಸುದ್ದಿ ಓದಿ...!

share with us

ಭುವನೇಶ್ವರ(ಒಡಿಶಾ): 26 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದ ಮಯೂರ್​ಭಂಜ್​ ಜಿಲ್ಲೆಯ ರಾಯ್​ರಂಗ್​ಪುರದ ನಿವಾಸಿ ಎಸ್​. ಮುತ್ತುಕುಮಾರನ್​​ ತಮಗೆ ಬಂದಿದ್ದ ಪಾರ್ಸೆಲ್​​ ತೆರೆದಾಗ ಅಚ್ಚರಿ ಕಾದಿತ್ತು. ಕುತೂಹಲದಿಂದ ಪಾರ್ಸೆಲ್ ತೆರೆದು ನೋಡಿದಾಗ ಶಾಕ್​ಗೆ ಒಳಗಾಗಿದ್ದಾರೆ. ಮುತ್ತುಕುಮಾರ್ ಮೂಲತಃ ಆಂಧ್ರ ಪ್ರದೇಶದ ವಿಜಯವಾಡ ನಿವಾಸಿಯಾಗಿದ್ದು, ಪಾರ್ಸೆಲ್​​ನಲ್ಲಿ ಹಾವು ನೋಡಿದ ಮರುಕ್ಷಣವೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಕರೆಸಿಕೊಂಡಿದ್ದ. ಸುಮಾರು 15 ದಿನಗಳ ಹಿಂದೆ ಖಾಸಗಿ ಕಂಪನಿ ಮೂಲಕ ಪಾರ್ಸೆಲ್​ ಆರ್ಡರ್ ಮಾಡಿದ್ದ. ಗುಂಟೂರಿನಿಂದ ಆಗಸ್ಟ್ 9ರಂದು ಪಾರ್ಸೆಲ್​ ರವಾನೆಯಾಗಿತ್ತು. ಮನೆಬಳಕೆಯ ವಸ್ತುಗಳಿವೆ ಎಂದು ಪಾರ್ಸೆಲ್ ತೆರೆದಾಗ ಹಾವನ್ನು ನೋಡಿ ಮುತ್ತುಕುಮಾರ್ ಬೆಚ್ಚಿಬಿದ್ದಿದ್ದ. ಸದ್ಯ ಹಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا