Urdu   /   English   /   Nawayathi

ನೆರೆ ಸಂತ್ರಸ್ತರ ಸಹಾಯಕ್ಕೆ ನಿಂತ ಚಿಣ್ಣರು... ಇವ್ರು ಹಣ ಸಂಗ್ರಹಿಸಿದ ರೀತಿ ಎಲ್ಲರಿಗೂ ಮಾದರಿ!

share with us

ಕೇರಳ/ಮಲಪ್ಪುರಂ: 26 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ವಿವಿಧ ಬಗೆಯ ಸಿಹಿತಿಂಡಿಗಳನ್ನು ರಸ್ತೆ ಬದಿ ನಿಂತು ಮಾರಾಟ ಮಾಡುವ ಮೂಲಕ ನೆರೆ ಸಂತ್ರಸ್ತರ ಸಹಾಯಕ್ಕೆ ವೆಂಗರ ಪರಪ್ಪೂರ್ ಎಎಂಎಲ್‌ಪಿ ಶಾಲೆಯ ವಿದ್ಯಾರ್ಥಿಗಳು ಮುಂದಾದ್ದು, ಸಂಗ್ರಹಿಸಿರುವ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ. ವಿವಿಧ ಬಗೆಯೆ ಸಿಹಿ ತಿಂಡಿ ತಿನಿಸುಗಳನ್ನು ಪುಟ್ಟ ಮಕ್ಕಳು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ದೇಣಿಗೆ ರೂಪದಲ್ಲಿ ಸಂತ್ರಸ್ತರಿಗೆ ನೀಡುತ್ತಿದ್ದಾರೆ. ವೆಂಗರ-ಕೊಟ್ಟಕ್ಕಲ್ ಮಾರ್ಗದಲ್ಲಿರುವ ಕುಮಂಕಲ್ ಸೇತುವೆ ಬಳಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವೆಂಗರ ಎಸ್‌ ಐ ಮುಹಮ್ಮದ್ ರಫೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಶೇಷ ಅಂದ್ರೆ, ಈ ಕಾರ್ಯಕ್ರಮಕ್ಕೆ 'ರುಚಿಕೂಟ್​' ಎಂದು ಹೆಸರಿಡಲಾಗಿದ್ದು, ಕೇಕ್, ಉನ್ನಿಯಪ್ಪಂ ಸೇರಿದಂತೆ ಸುಮಾರು 50ಕ್ಕೂ ಅಧಿಕ ಬಗೆಯ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇನ್ನು, ಮಕ್ಕಳ ಹೊಸ ಬಗೆಯ ಈ ಪ್ರಯತ್ನಕ್ಕೆ ಪೋಷಕರು, ಶಿಕ್ಷಕರು ಸಹ ಕೈ ಜೋಡಿಸಿದ್ದು, ಪ್ರಯಾಣಿಕರು ಸಹ ವಿವಿಧ ಖಾದ್ಯಗಳನ್ನು ಖರೀದಿಸುವ ಮೂಲಕ ಚಿಣ್ಣರನ್ನು ಪ್ರೋತ್ಸಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಮಕ್ಕಳ ಈ ಸಹಕಾರದ ಗುಣ ಎಲ್ಲರಿಗೂ ಮಾದರಿಯಾಗಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا