Urdu   /   English   /   Nawayathi

ವಿಮಾನ - ಹೆಲಿಕಾಪ್ಟರ್ ನಡುವೆ ಡಿಕ್ಕಿ: 7 ಜನರ ಸಾವು

share with us

ಕಾಮಿ ವೆಲ್​​​ ಡೇ ಕಾಸ್ಟಿಕ್ಸ್​​: 26 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಸ್ಪ್ಯಾನಿಷ್ ದ್ವೀಪವಾದ ಮಲ್ಲೋರ್ಕಾದಲ್ಲಿ ದೃಶ್ಯ ವೀಕ್ಷಣೆಯ ಹೆಲಿಕಾಪ್ಟರ್ ಮತ್ತು ಸಣ್ಣ ವಿಮಾನದ ನಡುವೆ ಡಿಕ್ಕಿಯಾಗಿದ್ದು, ಏಳು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟವರಲ್ಲಿ ಮೂವರು ವಯಸ್ಕರು ಮತ್ತು ಇಬ್ಬರು ಮಕ್ಕಳು ಹೆಲಿಕಾಪ್ಟರ್​ನಲ್ಲಿದ್ದವರಾಗಿದ್ದು, ಇನ್ನಿಬ್ಬರು ವಿಮಾನದಲ್ಲಿದ್ದರೆಂದು ಸ್ಪ್ಯಾನಿಷ್ ದ್ವೀಪದ ಸ್ಥಳೀಯ ಸರ್ಕಾರ ಟ್ವೀಟ್​ ಮಾಡಿದೆ. ಇನ್ನು ಅಪಘಾತದ ವೇಳೆ ವಿಮಾನದ ಒಂದು ಭಾಗ ಗ್ರಾಮೀಣ ಪ್ರದೇಶದ ಮನೆಗಳ ಬಳಿ ಬಿದ್ದಿದೆ ಎಂದು ಸ್ಪಾನಿಷ್​​ ಖಾಸಗಿ ವಾರ್ತಾ ಇಲಾಖೆ ತಿಳಿಸಿದೆ. ದೃಶ್ಯ ವೀಕ್ಷಣೆ ನಡೆಸುತ್ತಿದ್ದ ಹೆಲಿಕಾಪ್ಟರ್​ನಲ್ಲಿದ್ದವರಲ್ಲಿ ಒಬ್ಬ ಪ್ರಯಾಣಿಕ ಇಟಾಲಿಯನ್ ಆಗಿದ್ದು, ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಸ್ಪೇನ್‌ನ ಉಸ್ತುವಾರಿ ಪ್ರಧಾನಿ ಪೆಡ್ರೊ ಸ್ಯಾಂಚೆ ನೊಂದ ಕುಟುಂಬಗಳಿಗೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದು, ಅಪಘಾತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا