Urdu   /   English   /   Nawayathi

ದ್ವಿಮುಖ ತಂತ್ರದಿಂದ ಕಾಶ್ಮೀರ ಬಿಕ್ಕಟ್ಟು ಬಗೆಹರಿಸಲು ಮುಂದಾದ ಟ್ರಂಪ್ ಆಡಳಿತ- ಮೂಲಗಳು

share with us

ವಾಷಿಂಗ್ಟನ್: 25 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ಬವಿಸಿರುವ ಬಿಕ್ಕಟ್ಟನ್ನು ದ್ವಿಮುಖ ತಂತ್ರದ ಮೂಲಕ ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ  ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದಲ್ಲಿ ವಿಶೇಷವಾಗಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗೆ ಆರ್ಥಿಕ ನೆರವು ಅಥವಾ ಯುದ್ದೋಪಕರಣಗಳನ್ನು ಪೂರೈಸದಂತೆ, ಗಡಿ ಪ್ರದೇಶದಲ್ಲಿ ಒಳನುಸುಳದಂತೆ ಪಾಕಿಸ್ತಾನಕ್ಕೆ ಒತ್ತಡ ಹಾಕುವುದು ಅಮೆರಿಕಾದ ಮೊದಲ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಸೃಷ್ಟಿಸಿ ಮಾನವ ಹಕ್ಕುಗಳ ರಕ್ಷಣೆ ಮಾಡುವುದು, ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ರದ್ದುಪಡಿಸುವಂತೆ ಭಾರತವನ್ನು ಪ್ರೋತ್ಸಾಹಿಸುವುದು ಅಮೆರಿಕಾದ ಮತ್ತೊಂದು ತಂತ್ರವಾಗಿದೆ. ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕ್ ಸೇನೆ ಭಾರತದ ಗಡಿ ಪ್ರವೇಶಿಸದಂತೆ ಹಾಗೂ ತನ್ನ ನೆಲದಲ್ಲಿನ ಉಗ್ರಗಾಮಿ ಗುಂಪುಗಳನ್ನು ಮಟ್ಟ ಹಾಕುವಂತೆ ಪಾಕಿಸ್ತಾನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದಾರೆ ಎಂದು ಅಮೆರಿಕಾದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಣ ಬಿಕ್ಕಟ್ಟಿನ ನಡುವೆಯೂ ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಅವಕಾಶ ನೀಡದಿರಲು ಪಾಕಿಸ್ತಾನ ಬದ್ಧವಾಗಿರಬೇಕಾಗುತ್ತದೆ.  ಇಂತಹ ಯಾವುದೇ ತಂತ್ರಗಳನ್ನು ಪುನರಾವರ್ತಿಸದಂತೆ  ಪಾಕಿಸ್ತಾನಕ್ಕೆ ಅಮೆರಿಕಾ ಎಚ್ಚರಿಕೆ ನೀಡಿದೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا