Urdu   /   English   /   Nawayathi

ಯಾರು ನಿಜವಾದ ಸುಮಲತಾ? ಗೊಂದಲಗಳಿಗೆ ತೆರೆ ಎಳೆದ ಮಂಡ್ಯ'ಗೌಡ್ತಿ'

share with us

ಬೆಂಗಳೂರು: 24 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಮಂಡ್ಯ ಲೋಕಸಭೆ ಚುನಾವಣೆಯಲ್ಲಿ  ತಮ್ಮದೇ ಹೆಸರಿನ ಮೂವರ ವಿರುದ್ಧ ಗೆದ್ದು ಬೀಗಿದ ಸಂಸದೆ ಸುಮಲತಾ ಅಂಬರೀಶ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೋರಾಟ ಮಾಡುತ್ತಿದ್ದಾರೆ, ಸುಮಲತಾ ಅಂಬರೀಷ್ ಅವರ ಹೆಸರಿನಲ್ಲಿ ಹಲವು ನಕಲಿ ಖಾತೆಗಳು ಚಾಲನೆಯಲ್ಲಿದ್ದು ಅವರ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಗುರುವಾರ ಸೈಬರ್ ಕ್ರೈಂ ಆಫೀಸಿಗೆ ತೆರಳಿದ್ದ ಸುಮಲತಾ ದೂರು ದಾಖಲಿಸಿದ್ದಾರೆ, ಸುಮಲತಾ ಹೆಸರಿನಲ್ಲಿ 7 ಫೇಸ್ ಬುಕ್ ಖಾತೆಗಳಿದ್ದು, ಅವುಗಳನ್ನು ಬ್ಲಾಕ್ ಮಾಡಿಸಿದ್ದಾರೆ, ತಮ್ಮ ವಯಕ್ತಿಕ ಫೇಸ್ ಬುಕ್ ಖಾತೆಯನ್ನು ಪರಿಶೀಲನೆ ಮಾಡಿಸಿರುವ ಸುಮಲತಾ ಟ್ವಿಟ್ಟರ್ ಖಾತೆಯನ್ನು ಪರಿಶೀಲಿಸಬೇಕಾಗಿದೆ. ಇದು 4 ವರ್ಷಗಳ ಹಿಂದಿನ ಹಳೆಯ ವಿಡಿಯೋ ಆಗಿದೆ. ನನ್ನ ಹೆಸರಿನ ನಕಲಿ ಅಕೌಂಟ್‍ನಲ್ಲಿ ಕಿಡಿಗೇಡಿಗಳು ವಿಡಿಯೋ ಹಾಕಿದ್ದು, ಇದರಿಂದ ನನ್ನ ತೇಜೋವಧೆಗೆ ಯತ್ನಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಫೇಸ್‍ಬುಕ್‍ನಲ್ಲಿ ನಕಲಿ ಅಕೌಂಟ್ ತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂಸದೆ  ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಗುರುವಾರವಷ್ಟೇ ನಕಲಿ ಅಕೌಂಟ್ ಗಳ ಬಗ್ಗೆ ತಮ್ಮ ಫೆಸ್ ಬುಕ್ ಪೇಜಿನಲ್ಲಿ ಸುಮಲತಾ ಅವರು ಬರೆದುಕೊಂಡಿದ್ದಾರೆ. ಸ್ನೇಹಿತರೇ, ನನ್ನ ಹೆಸರಿನಲ್ಲಿ ಹಲವಾರು ನಕಲಿ FB ಪುಟಗಳನ್ನು ರಚಿಸಲಾಗಿದೆ ಎಂದು ನನ್ನ ಗಮನಕ್ಕೆ ತರಲಾಗಿದೆ, ಸೈಬರ್ ಅಪರಾಧ ಶಾಖೆಯ ಸಹಾಯದಿಂದ ಈ ಕಿಡಿಗೇಡಿತನದವರೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಸ್ನೇಹಿತರಿಗಾಗಿ ಪರಿಶೀಲಿಸಿದ FB ಹ್ಯಾಂಡಲ್ ಆಗಿದೆ ಮತ್ತು ನನ್ನ ಸದಸ್ಯರೊಂದಿಗೆ ಸಂವಹನ ನಡೆಸುವ ಇನ್ನೊಂದು ಅಧಿಕೃತ ಪುಟವನ್ನು ಮಾತ್ರ ಹೊಂದಿದ್ದೇನೆ. ನಾನು ಆ ಲಿಂಕ್ ಅನ್ನು ಇಲ್ಲಿ ಪೋಸ್ಟ್ ಮಾಡುತ್ತೇನೆ. ಅಷ್ಟರಲ್ಲಿ ಬೇರೆ ಯಾವುದೇ ಅನಧಿಕೃತ ಪುಟವನ್ನು ಯಾರಾದರೂ ಗಮನಿಸಿದರೆ ದಯವಿಟ್ಟು ಅದನ್ನು ತಕ್ಷಣ ವರದಿ ಮಾಡಿ. ಎಂದು ಪೋಸ್ಟ್ ಹಾಕಿದ್ದಾರೆ. ನನ್ನ ಹೆಸರಿನಲ್ಲಿ ಹಲವಾರು ನಕಲಿ ಫೇಸ್‍ಬುಕ್ ಖಾತೆಗಳನ್ನು ರಚಿಸಲಾಗಿದೆ ಎಂದು ನನ್ನ ಗಮನಕ್ಕೆ ತರಲಾಗಿದೆ. ಸೈಬರ್ ಅಪರಾಧ ಶಾಖೆಯ ಸಹಾಯದಿಂದ ಈ ಕಿಡಿಗೇಡಿ ತನದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಸ್ನೇಹಿತರಿಗಾಗಿ ಪರಿಶೀಲಿಸಿದ ಫೇಸ್‍ಬುಕ್ ಖಾತೆಯಾಗಿದೆ ಮತ್ತು ನನ್ನ ಸದಸ್ಯರೊಂದಿಗೆ ಸಂವಹನ ನಡೆಸುವ ಇನ್ನೊಂದು ಅಧಿಕೃತ ಪುಟವನ್ನು ಮಾತ್ರ ಹೊಂದಿದ್ದೇನೆ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ಇದೇ ವೇಳೆ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಗಳ ಲಿಂಕ್ ಶೇರ್ ಮಾಡಿರುವ ಅವರು, ಯಾವುದೇ ಅನಧಿಕೃತ ಪುಟವನ್ನು ಯಾರಾದರೂ ಗಮನಿಸಿದರೆ ದಯವಿಟ್ಟು ಅದನ್ನು ತಕ್ಷಣ ವರದಿ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಕೆಲ ನಕಲಿ ಖಾತೆಗಳ ಸ್ಕ್ರೀನ್ ಸಾಟ್‍ಗಳನ್ನು ಪೋಸ್ಟ್ ಮಾಡಿ ಜಾಗೃತಿ ಮೂಡಿಸಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا