Urdu   /   English   /   Nawayathi

ಸೇನೆಯಿಂದ ಕಾಶ್ಮೀರದಲ್ಲಿ ದರೋಡೆ ಆರೋಪ: ಶೆಹ್ಲಾ ಬಂಧನಕ್ಕೆ ವಕೀಲರ ಆಗ್ರಹ

share with us

ನವದೆಹಲಿ: 20 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್​ ಮಾಡಿದ್ದ ಸಾಮಾಜಿಕ ಕಾರ್ಯಕರ್ತೆ ಶೆಹ್ಲಾ ರಷೀದ್​ ಅವರನ್ನು ಕೂಡಲೇ ಬಂಧಿಸುವಂತೆ ವಕೀಲರು ಆಗತ್ರಹಿಸಿದ್ದಾರೆ. ಸುಪ್ರೀಂಕೋರ್ಟ್​ ವಕೀಲ ಅಲಾಖ್​ ಅಲೋಕ್​ ಶ್ರೀವತ್ಸವ, ಬಾಂಬೆ ಹೈ ಕೋರ್ಟ್​ ವಕೀಲ ವೀರೇಂದ್ರ ಜಬ್ರಾ ರಷ್ದಿ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ರಷ್ದಿ ಅವರನ್ನು ಬಂಧಿಸುವಂತೆ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಶೆಹ್ಲಾ ಮಾಡಿದ್ದ ಟ್ವೀಟ್​ ಏನು?
ಭಾನುವಾರವಷ್ಟೆ ಟ್ವೀಟ್​ ಮಾಡಿದ್ದ ಶೆಹ್ಲಾ ಅವರು ಭಾರತೀಯ ಸೇನೆಯು ಕಾಶ್ಮೀರ ನಿವಾಸಿಗಳ ಮನೆಗೆ ತಡ ರಾತ್ರಿಯಲ್ಲಿ ನುಗ್ಗುತ್ತಿದೆ. ಅವರ ಮಕ್ಕಳನ್ನು ಹೊತ್ತೊಯ್ಯುತ್ತಿದೆ. ದರೋಡೆ ಮಾಡಿ, ಬೇಕಂತಲೇ ದಿನಸಿಯನ್ನು ನೆಲಕ್ಕೆ ಚೆಲ್ಲುತ್ತಿದೆ ಎಂದು ಆರೋಪಿಸಿದ್ದರು. ಮುಂದುವರಿದ ಟ್ವೀಟ್​ನಲ್ಲಿ ಕೇಂದ್ರ ಸರ್ಕಾರವು ಶೆಹ್ಲಾ ರಷ್ದಿ, ಉಮರ್​ ಅಬ್ದುಲ್ಲಾ ಸೇರಿದಂತೆ ಎಡಪಂಥೀಯ ನಿಲುವು ಹೊಂದಿರುವ ಕೆಲವು ವ್ಯಕ್ತಿಗಳು ಹಾಗೂ ವಾಹಿನಿಗಳಿಗೆ ಪಾಕಿಸ್ತಾನ ಹಣ ನೀಡುತ್ತಿದೆ ಎಂದು ಆರೋಪಿಸಿದೆ ಅಷ್ಟಕ್ಕೂ ಪಾಕಿಸ್ತಾನಕ್ಕೆ ಅಷ್ಟೋಂದು ಹಣ ಎಲ್ಲಿಂದ ಬರಬೇಕು ಎಂದು ಟ್ವೀಟ್​ ಮಾಡಿದ್ದರು.

ವಿವಾದವಾದ ಟ್ವೀಟ್​ಗಳು ಯಾವುವು?
ಶೆಹ್ಲಾ ಅವರು ಒಟ್ಟು 10ಟ್ವೀಟ್​ಗಳನ್ನು ಮಾಡಿದ್ದರು. ಈ ಪೈಕಿ ಕೆಲವು ಕಾಶ್ಮೀರದಲ್ಲಿ ಕೇಬಲ್​, ಮೊಬೈಲ್​ ಸಂಪರ್ಕ ಸಿಗದಿರುವುದು, ಗ್ಯಾಸ್​ ಇಲ್ಲದಿರುವುದು. ಮಕ್ಕಳು ಹಸಿದಿರುವ ಕುರಿತದ್ದಾದರೆ. 9 ಹಾಗೂ 10ನೇ ಟ್ವೀಟ್​ನಲ್ಲಿ ಭಾರತೀಯ ಸೇನೆಯ ಮೇಲೆ ಗಂಭೀರ ಆರೋಪ ಮಾಡಿದ್ದರು. ಕಾಶ್ಮೀರ ವ್ಯಕ್ತಿಯನ್ನು ಬಂಧಿಸಿ ಅವರಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದರು.

ತನಿಖೆಗೆ ಸಿದ್ಧ: ಶೆಹ್ಲಾ ಸ್ಪಷ್ಟನೆ
ತಾವು ಮಾಡಿದ್ದ ಟ್ವೀಟ್​ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಶೆಹ್ಲಾ ಅವರು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಮಾಡಿದ್ದ ಟ್ವೀಟ್​ಗಳು ಕಾಶ್ಮೀರ ಜನರ ನಿಜ ಪರಿಸ್ಥಿತಿಯನ್ನು ಆಧರಿಸಿದೆ. ನಾನು ಒಂದಷ್ಟು ಜನರನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಇಷ್ಟಾದರೂ ನನ್ನ ಮೇಲೆ ತನಿಖೆ ನಡೆಸುವುದಾದರೆ ನಾನು ಸಿದ್ಧ ಎಂದು ಹೇಳದ್ದಾರೆ.

ವಕೀಲರ ವಾದ ಏನು?
ಶೆಹ್ಲಾ ಅವರು ಜೆಎನ್​ಯು ವಿವಿಯ ವಿದ್ಯಾರ್ಥಿ ನಾಯಕಿಯಾಗಿದ್ದರು. ಪ್ರಸ್ತುತ ಕಾಶ್ಮೀರ ಪಕ್ಷವೊಂದರ ಪರ ಕೆಲಸ ಮಾಡುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಾಶ್ಮೀರ ಸೇನೆ, ಭಾರತ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದ್ದು, ಅದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ವಿನಾಕಾರಣ ಕಾಶ್ಮೀರದಲ್ಲಿ ಹಾಗೂ ಭಾರತದಲ್ಲಿ ದ್ವೇಷ ಹುಟ್ಟು ಹಾಕುವ ನಿಟ್ಟಿನಲ್ಲಿ ಟ್ವೀಟ್​ ಮಾಡಿದ್ದಾರೆ. ನೀವು ಗಮನಿಸಿದರೆ ಅಂತಾರಾಷ್ಟ್ರೀಯ ಪತ್ರಕರ್ತರು, ನಾಯಕರು ಅದನ್ನು ರೀ ಟ್ವೀಟ್​ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹೋಗಬೇಕೆಂಬುದು ಶೆಹ್ಲಾ ಅವರ ಉದ್ದೇಶ. ವಿಧಿ 370ರ ಕುರಿತು ಬೇರೆ ದೇಶಗಳೂ ಭಾರತವನ್ನು ಪ್ರಶ್ನಿಸುವಂತೆ ಮಾಡಬೇಕು ಎಂದು ಅವರು ಬಯಸಿದ್ದಾರೆ ಎಂದು ವಕೀಲ ಅಲಾಖ್​ ಅಲೋಕ್​ ಶ್ರೀವತ್ಸವ ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا