Urdu   /   English   /   Nawayathi

ಅಣುಬಾಂಬ್ ಬಳಕೆ ಕುರಿತು ಭಾರತದ ಹೇಳಿಕೆ ಯುದ್ಧೋತ್ಸಾಹವನ್ನು ತೋರಿಸುತ್ತದೆ: ಪಾಕ್

share with us

ನವದೆಹಲಿ: 17 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಅಣುಬಾಂಬ್ ಬಳಕೆ ಕುರಿತು ಭಾರತ ಪಾಲಸಿಕೊಂಡು ಬರುತ್ತಿರುವ ನೋ ಫಸ್ಟ್ ಯೂಸ್ ಪಾಲಿಸಿ(ಮೊದಲು ಬಳಸುವುದಿಲ್ಲ)ಗೆ ನಾವು ಕಟ್ಟು ಬೀಳುವುದಿಲ್ಲ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಆಘಾತಕಾರಿ ಮತ್ತು ದುರದೃಷ್ಟಕರ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು ಶನಿವಾರ ಹೇಳಿದ್ದಾರೆ. ನಿನ್ನೆ ರಾಜಸ್ಥಾನದ ಪೋಕ್ರಾನ್'ನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಣಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ಅಣುಬಂಬ್'ಗೆ ಸಂಬಂದಿಸಿದಂತೆ ನೋ ಫಸ್ಟ್ ಯೂಸ್ ಪಾಲಿಸಿಗೆ ಭಾರತ ಈಗಲೂ ಬದ್ಧವಾಗಿದೆ. ಆದರೆ ಮುಂದೆ ಏನಾಗುತ್ತದೆ ಎಂಬುದು ಆಗಿನ ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದರು. ಇಂದು ರಾಜನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾ ಮೊಹಮ್ಮದ್ ಖುರೇಶಿ ಭಾರತ ನೀಡಿರುವುದು ಆಘಾತಕಾರಿ ಹಾಗೂ ದುರದೃಷ್ಟಕರ ಹೇಳಿಕೆ. ಇದು ಭಾರತದ ಬೇಜವಾಬ್ದಾರಿತನ ಹಾಗೂ ಯುದ್ಧೋತ್ಸಾಹವನ್ನು ತೋರಿಸುತ್ತದೆ ಎಂದಿದ್ದಾರೆ. 'ಪಾಕಿಸ್ತಾನ ಯಾವಾಗಲೂ ದಕ್ಷಿಣ ಏಷ್ಯಾದಲ್ಲಿ ಪರಮಾಣು ಸಂಯಮಕ್ಕೆ ಸಂಬಂಧಿಸಿದ ಕ್ರಮಗಳನ್ನು ಪ್ರಸ್ತಾಪಿಸಿದೆ. ನಮ್ಮ ಈ ನಡೆಯನ್ನು ನಾವು ಮುಂದುವರೆಸುತ್ತೇವೆ' ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا