Urdu   /   English   /   Nawayathi

ಮನೆ ಸೇರಿದ ನೆರೆ ಸಂತ್ರಸ್ತರು

share with us

ಗೋಕರ್ಣ: 14 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಅಗ್ರಗೋಣದ ಜುಗಾ, ರ್ಕತುರಿ ಮತ್ತು ಸಣ್ಣಕೂರ್ವೆ ನಡುಗಡ್ಡೆಯಲ್ಲಿ ಒಂದು ವಾರದಿಂದ ಕಾಣಿಸಿಕೊಂಡಿದ್ದ ಗಂಗಾವಳಿ ನೆರೆ ಸೋಮವಾರ ಸಂಜೆ ಇಳಿದಿದೆ. ಮಂಗಳವಾರ ಬೆಳಗ್ಗೆಯಿಂದ ನದಿ ಪಾತ್ರದ ರ್ಕತುರಿ ಮತ್ತು ಸಣ್ಣ ಕೂರ್ವೆ ಭಾಗದ ಜನ ತಮ್ಮ ಮನೆಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.

ಮನೆಯಲ್ಲಿ ಕೆಸರು: ಮೀನುಗಾರರ ಎಲ್ಲ 26 ಮನೆಗಳು ವಾರದಿಂದ ಸಂಪೂರ್ಣ ನೀರಿನಲ್ಲಿದ್ದ ಕಾರಣ ಮನೆಯಲ್ಲಿ ಕೆಸರು ತುಂಬಿದೆ. ಅಲ್ಲದೆ, ವಿದ್ಯುತ್ ಉಪಕರಣಗಳು, ದಿನ ಬಳಕೆ ಸಾಮಗ್ರಿ ಎಲ್ಲವೂ ಹಾಳಾಗಿವೆ. ಹೀಗಾಗಿ ಸಂತ್ರಸ್ತರೆಲ್ಲ ಮತ್ತೆ ವಾರದ ಕಾಲ ಪರಿಹಾರ ಕೇಂದ್ರ ವಾಸಿಸಬೇಕಾಗಿದೆ. ಗದ್ದೆಯಲ್ಲಿ ನಾಟಿ ಮಾಡಿದ್ದ ಭತ್ತದ ಸಸಿಗಳು ಕೊಚ್ಚಿಹೋಗಿವೆ. ಕೆಲ ಗದ್ದೆಯಲ್ಲಿ ಇನ್ನೂ ನೀರು ಇಳಿದಿಲ್ಲ.

ಸುರಕ್ಷಿತ ಜಾಗ ಒದಗಿಸಿ: ಕಳೆದ ಅನೇಕ ವರ್ಷಗಳಿಂದ ಜುಗಾದ ಭಾಗದ ಮೀನುಗಾರರು ಮಳೆಗಾಲದಲ್ಲಿ ಗಂಗಾವಳಿ ನದಿ ಪ್ರವಾಹಕ್ಕೆ ಒಳಗಾಗಿ ತೊಂದರೆ ಅನುಭವಿಸುತ್ತಾರೆ. ಪ್ರತಿ ವರ್ಷ ಎರಡು-ಮೂರು ದಿನದ ವರೆಗೆ ಮಾತ್ರ ಪ್ರವಾಹ ವಿರುತ್ತಿತ್ತು. ಈ ಬಾರಿ ವಾರದ ಕಾಲ ಜನರನ್ನು ಪ್ರವಾಹದಲ್ಲಿ ಸಿಲುಕಿದ್ದಾರೆ. ಹೀಗಾಗಿ ಸುರಕ್ಷಿತ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ಜಾಗ ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಂಕೋಲಾ ತಾಲೂಕಿಗೆ ಸೇರಿದ ಈ ಭಾಗಗಳು ತಾಲೂಕು ಕೇಂದ್ರದಿಂದ ದೂರ ಇವೆ. ಹೀಗಾಗಿ ಅಧಿಕಾರಿಗಳು ಇಲ್ಲಿಗೆ ಭೇಟಿ ಕೊಟ್ಟಿಲ್ಲ.

ತೂಗು ಸೇತುವೆ ಸುರಕ್ಷಿತ: ಸಣ್ಣ ಕೂರ್ವೆ ನಡುಗಡ್ಡೆ ಮತ್ತು ಸಗಡಗೇರಿ ಮಧ್ಯೆ ಇರುವ ತೂಗು ಸೇತುವೆ ಪ್ರವಾಹದಿಂದ ಯಾವುದೇ ತೊಂದರೆಗೆ ಒಳಗಾಗದೆ ಸುರಕ್ಷಿತವಾಗಿದೆ. ಆದರೆ, ರ್ಕತುರಿಯಿಂದ ತೂಗು ಸೇತುವೆಗೆ ಹೋಗಲು ಇರುವ ಸಂಕ ಮುರಿದಿದೆ.

ನೆರೆಯಲ್ಲಿದ್ದ ಬೆಕ್ಕು: ಮೀನುಗಾರರ ಮನೆಯೊಂದರ ಅಟ್ಟದಲ್ಲಿ ಕಳೆದ ಏಳು ದಿನದಿಂದ ಬೆಕ್ಕು ತನ್ನ ಮರಿಗಳ ಜೊತೆ ಮನೆಯವರಿಗಾಗಿ ಕಾಯುತ್ತಿರುವ ದೃಶ್ಯ ಮಂಗಳವಾರ ಕಂಡು ಬಂದಿದೆ. ಮನೆಯವರು ಬಂದಾಗ ಹಸಿವಿನಿಂದ ಬಸವಳಿದ ಬೆಕ್ಕಿನ ಸಂಸಾರ ಪತ್ತೆಯಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا