Urdu   /   English   /   Nawayathi

ಭಟ್ಕಳದಲ್ಲಿ ಮತ್ತೆ ವರುಣಾರ್ಭಟ

share with us

ಭಟ್ಕಳ: 11 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕಳೆದ 2 ದಿನಗಳಿಂದ ಅಬ್ಬರ ಕಡಿಮೆ ಮಾಡಿದ್ದ ಮಳೆರಾಯ ಶನಿವಾರ ಮತ್ತೆ ಆರ್ಭಟ ಆರಂಭಿಸಿದ್ದಾನೆ. ಕಳೆದ ಎರಡು ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿತ್ತು. ಆದರೆ, ಶನಿವಾರ ಬೆಳಿಗ್ಗೆಯಿಂದಲೇ ಧಾರಕಾರ ಮಳೆ ಆರಂಭವಾಗಿದ್ದು ಮಧ್ಯಾಹ್ನದೊಳಗೆ 47.4 ಮಿ.ಮೀ. ಮಳೆಯಾಗಿದೆ. ಶನಿವಾರ ಸುರಿದ ಧಾರಾಕಾರ ಮಳೆಗೆ ಬೆಳ್ಕೆ ಗ್ರಾಮದ ಮಾಸ್ತಿ ಸೋಮಯ್ಯ ಮೊಗೇರ ಇವರ ವಾಸದ ಮನೆಯ ಮೇಲೆ ಮಾವಿನ ಮರ ಬಿದ್ದು ಆರ್​ಸಿಸಿ ಕಟ್ಟಡದ ಮೇಲ್ಚಾವಣಿಯ ಸ್ವಲ್ಪ ಭಾಗ ಹಾನಿಯಾಗಿದೆ. ತಾಲೂಕಿನ ಹೆಬಳೆ ಗ್ರಾಮದ ಹೆರ್ತಾರ 2ನೇ ಕ್ರಾಸಿನ ಸೋಮಿ ಕುಪ್ಪಯ್ಯ ಗೊಂಡ ಇವರ ಮನೆಯ ಮೇಲ್ಛಾವಣಿಯ ಮೇಲೆ ಮರ ಕುಸಿದು ಬಿದ್ದು ಹಾನಿಯಾಗಿದೆ. ಮುಂಡಳ್ಳಿಯ ಮೇರಿ ಸಿಂಪ್ರನ್ ಡಿಸೋಜ ಇವರ ವಾಸ್ತವ್ಯದ ಮನೆಯ ಮೇಲೆ ಗಾಳಿ ಮಳೆಗೆ ಕಾಡು ಜಾತಿಯ ಮರ ಬಿದ್ದು ಶೀಟ್​ಗಳಿಗೆ ಹಾನಿಯಾಗಿದೆ. ಶುಕ್ರವಾರ ರಾತ್ರಿ ಇಲ್ಲಿನ ಸಾಗರ ರಸ್ತೆಯಲ್ಲಿ ಮರಬಿದ್ದು ಕೆಲಕಾಲ ಭಟ್ಕಳ ಸಾಗರ ರಸ್ತೆಯ ಸಂಪರ್ಕ ಸ್ಥಗಿತಗೊಂಡಿತ್ತು. ತಾಲೂಕಿನ ಕುರಂದುರು, ಬೈಲೂರು, ಮಠದ ಹಿತ್ಲುವಿನಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಬಿದ್ದು ಕಂಬಗಳು ತುಂಡಾಗಿವೆ. ಕಾಂಗ್ರೆಸ್ ನಾಯಕರ ಸಾಂತ್ವನ: ಮೂಲ ಸೌಕರ್ಯಗಳಾದ ಊಟ ಉಪಚಾರ, ಉಡುಪುಗಳು ಸೇರಿದಂತೆ ಅತಿ ಅವಶ್ಯಕವಾದ ವೈದ್ಯಕೀಯ ಸೌಲಭ್ಯದ ನೆರವು ಬೇಕಾದಲ್ಲಿ ಯಾವುದೇ ಸಂದರ್ಭದಲ್ಲಿ ಬೇಕಾದರೂ ತನ್ನನ್ನು ಸಂರ್ಪಸಿ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು. ಶುಕ್ರವಾರ ಭಟ್ಕಳ ವಿಧಾನಸಭಾ ಕ್ಷೇತ್ರದ ಪರಿಹಾರ ಕೇಂದ್ರಕ್ಕೆ ಅವರು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಹೊನ್ನಾವರ ತಾಲೂಕಿನ ಹಡಿನಬಾಳ, ಗುಂಡುಬಾಳ, ಚಿಕ್ಕನಕೋಡ, ಹಾಡಗೇರಿ ಕಟಗೇರಿ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪರಿಹಾರ ಕೇಂದ್ರಕ್ಕೆ ಕಾಂಗ್ರೆಸ್ ಮುಖಂಡರ ತಂಡ ಭೇಟಿ ನೀಡಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಎಸ್.ಕೆ. ಭಾಗ್ವತ್, ಕೃಷ್ಣೆ ಗೌಡ, ಗೋಪಾಲ ನಾಯ್ಕ, ಸುಬ್ರಮಣ್ಯ ಸೇರಿದಂತೆ ಇತರರು ಇದ್ದರು.

ತಗ್ಗು ಪ್ರದೇಶಕ್ಕೆ ನೀರು: ತಾಲೂಕಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ತಲಾಂದ ಬೆಳಲಖಂಡ, ಮಣ್ಕುಳಿ ಸೇರಿ ವಿವಿಧ ಪ್ರದೇಶಗಳು ಜಲಾವೃತಗೊಂಡಿವೆ. ಮಣ್ಕುಳಿಯ ಸರ್ಕಲ್ ಬಳಿ ನೀರು ತುಂಬಲು ಆರಂಭಿಸುತ್ತಿದ್ದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. 4 ಗಂಟೆಯ ಸುಮಾರಿಗೆ ಮಳೆ ಬಿಡುವು ನೀಡಿದ್ದು ಜನರು ಆತಂಕದಿಂದ ಪಾರಾಗಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا