Urdu   /   English   /   Nawayathi

ಅತಿವೃಷ್ಠಿ, ಪ್ರವಾಹದಿಂದ ಕೆಎಸ್ಆರ್‌ಟಿಸಿಗೆ 3.30 ಕೋಟಿ ರೂ. ನಷ್ಟ

share with us

ಬೆಂಗಳೂರು: 11 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ರಾಜ್ಯದ 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹ ಹಾಗೂ ಅತಿವೃಷ್ಠಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 3.30 ಕೋಟಿ ರೂ ನಷ್ಟ ಸಂಭವಿಸಿದೆ. ಮೊದಲೇ ನಷ್ಟದಲ್ಲಿದ್ದ ಇಲಾಖೆಗೆ ಪ್ರಾಕೃತಿಕ ವಿಕೋಪವು ಮತ್ತಷ್ಟು ಆರ್ಥಿಕ ಸಂಕಷ್ಟ ತಂದೊಡ್ಡಿದೆ.  ಆಗಸ್ಟ್ ಮೊದಲ ವಾರದಿಂದ ಆಗಸ್ಟ್ 10ರವರೆಗೆ ನಿಗಮದ ಬಸ್ಸುಗಳ 1545 ಅನುಸೂಚಿಗಳನ್ನು (ಷೆಡ್ಯುಲ್) ರದ್ದುಪಡಿಸಲಾಗಿದೆ.ಅಂದಾಜು 9,44,792 ಕಿ.ಮೀ ಸಂಚಾರವನ್ನು ಮಳೆ ಹಾಗೂ ಪ್ರವಾಹದಿಂದಾಗಿ ತಡೆಹಿಡಿಯಲಾಗಿದೆ. 16 ವಿಭಾಗಗಳಿಂದ ಒಟ್ಟು 4140 ಅನುಸೂಚಿಗಳನ್ನು ರದ್ದುಪಡಿಸಿದ್ದು, ಪೂರ್ಣ ಪ್ರಮಾಣದಲ್ಲಿ 1545 ಅನುಸೂಚಿಗಳು(ಷೆಡ್ಯುಲ್ಸ್) ಹಾಗೂ ಭಾಗಶಃ 2595 ಅನುಸೂಚಿಗಳನ್ನು ರದ್ದುಪಡಿಸಲಾಗಿದೆ. ನೆರೆ ಪ್ರಮಾಣ ಕಡಿಮೆಯಾಗಿ,ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ಸಿಕ್ಕರೆ ತಕ್ಷಣದಿಂದಲೇ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳನ್ನು ಓಡಿಸಲು ಇಲಾಖೆ ಸಿದ್ದವಾಗಿದೆ. ಅಲ್ಲದೆ ಈಗಾಗಲೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ನೆರೆ ಸಂತ್ರಸ್ಥರಿಗೆ ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ರವಾನೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا