Urdu   /   English   /   Nawayathi

370ನೇ ವಿಧಿ ರದ್ದು; ಸುಪ್ರೀಂ ಮೆಟ್ಟಿಲೇರಿದ ಎನ್​ಸಿಪಿ

share with us

ನವದೆಹಲಿ: 11 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಜಮ್ಮು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷ ಸುಪ್ರಿಂಕೋರ್ಟ್​ ಮೆಟ್ಟಿಲೇರಿದ್ದು, ಇದು ಅಸಾಂವಿಧಾನಿಕ ನಡೆ ಎಂದು ಪಕ್ಷ ಆರೋಪಿಸಿದೆ. ನ್ಯಾಷನಲ್​ ಕಾನ್ಫರೆನ್ಸ್ ಸಂಸದ ಮೊಹಮ್ಮದ್ ಅಕ್ಬರ್​​ ಲೋನ್​​ ಹಾಗೂ ಹುಸೇನ್​​ ಮಸೂದಿ ಅವರು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಜಮ್ಮು-ಕಾಶ್ಮೀರ ಪುನರ್​ವಿಂಗಡಣೆ ಕಾಯ್ದೆ-2019 ಹಾಗೂ ರಾಷ್ಟ್ರಪತಿ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. 370ನೇ ವಿಧಿ ಬದಲಿಸಲು ಅಥವಾ ರದ್ದುಮಾಡಲು ಇರುವ ಸಂವಿಧಾನಬದ್ಧ ಕಾನೂನುಗಳನ್ನು ಅನುಸರಿಸಿಲ್ಲ. ಕೇಂದ್ರ ಸರ್ಕಾರವು ಸಾಂವಿಧಾನಿಕ ಸಮಿತಿಯ ಶಿಫಾರಸಿನ ಮೇಲೆ ಮಾತ್ರ ಜಮ್ಮು & ಕಾಶ್ಮೀರಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಬಹುದು ಎಂದು ವಾದಿಸಿದ್ದಾರೆ. ಈ ಕೂಡಲೇ ರಾಷ್ಟ್ರಪತಿ ಅವರ ಆದೇಶವನ್ನು ಅನೂರ್ಜಿತಗೊಳಿಸಿ ಎಂದು ಅವರು ಆಗ್ರಹಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا