Urdu   /   English   /   Nawayathi

ಭೀಕರ ಪ್ರವಾಹ: ಬಾಲಕಿಯರನ್ನು 1.5 ಕಿ.ಮೀ ದೂರ ಭುಜದ ಮೇಲೆ ಹೊತ್ತು ಸಾಗಿದ ಕಾನ್ಸ್ ಟೇಬಲ್! ವಿಡಿಯೋ

share with us

ಮೊರ್ಬಿ: 11 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ದೇಶದ ವಿವಿಧೆಡೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿ ನಷ್ಟ ಉಂಟಾಗುತ್ತಿದೆ. ಪ್ರಕೃತಿಯ ರೌದ್ರವತಾರದಿಂದಾಗಿ ಮಹಿಳೆಯರು, ಮಕ್ಕಳು, ವೃದ್ಧರು ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದು, ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಗುಜರಾತಿನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಭೀಕರ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಹೆಣ್ಣು ಮಕ್ಕಳನ್ನು ಪೊಲೀಸ್ ಕಾನ್ಸ್ ಟೇಬಲ್ ತನ್ನ ಹೆಗಲ ಮೇಲೆ ಹೊತ್ತು ಸಾಗುವ ಮೂಲಕ ಅವರ ಜೀವ ಉಳಿಸಿದ್ದಾರೆ. ಮೊರ್ಬಿ ಜಿಲ್ಲೆಯ ಕಲ್ಯಾಣಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾಗರದಂತಿದ್ದ ಪ್ರವಾಹ ನೀರಿನಲ್ಲಿ ಸಿಲುಕಿ ಭಯಭೀತಗೊಂಡಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡು ಗುಜರಾತ್ ಪೊಲೀಸ್ ಕಾನ್ಸ್ ಟೇಬಲ್ ಪೃಥ್ವಿರಾಜ್ ಜಡೇಜಾ ಸುಮಾರು ಒಂದೂವರೆ ಕಿ.ಮೀ. ದೂರ  ಸುರಕ್ಷಿತವಾಗಿ ಹೊತ್ತು ಸಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೃಥ್ವಿರಾಜ್ ಜಡೇಜಾ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ANI@ANI

Pruthviraj Jadeja, a Gujarat police constable carried two children on his shoulders for over 1.5 km in flood waters in Kalyanpar village of Morbi district, to safety. (10.08)

19.3K

12:13 PM - Aug 11, 2019

Twitter Ads info and privacy

5,746 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا