Urdu   /   English   /   Nawayathi

ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

share with us

ಶಿರಸಿ: 07 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ಸುರಿದ ಕುಂಭದ್ರೋಣ ಮಳೆಗೆ ತಾಲೂಕು ನಲುಗಿದೆ. 175.5 ಮಿ.ಮೀ. ಮಳೆಯಾದ ಕಾರಣ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವರದಾ ನದಿಯಲ್ಲಿ ಪ್ರವಾಹ ಏರಿದ ಕಾರಣದಿಂದಾಗಿ ಬನವಾಸಿ ಮತ್ತು ದಾಸನಕೊಪ್ಪ ಗ್ರಾಮ ಪಂಚಾಯಿತಿಯ ಜನತೆ ದಿಗಿಲುಗೊಂಡಿದ್ದಾರೆ. ರಾತ್ರಿಯ ವೇಳೆ ಇಲ್ಲಿಯ ಅಜ್ಜರಣಿ ಸೇತುವೆಗೆ ನೀರು ತಾಗುತ್ತಿದ್ದರೆ ಬೆಳಗಾಗುವಷ್ಟರಲ್ಲಿ ಸೇತುವೆಯ ಮೇಲೆ ಆರು ಅಡಿಗಳಷ್ಟು ನೀರು ನಿಂತಿತ್ತು. ವರದೆಯ ದಡದಲ್ಲಿರುವ ಮೊಗಳ್ಳಿ, ನರೂರು, ಯಡಗೊಪ್ಪ, ಮುತಾಳಕೊಪ್ಪ ಯಡಿಯೂರಬೈಲ್, ಹೊಸಕೊಪ್ಪ ಇನ್ನಿತರ ಗ್ರಾಮಗಳಲ್ಲಿ ಭತ್ತದ ಹೊಲಗಳಿಗೆ ನೀರು ನುಗ್ಗಿದೆ. ಮಂಗಳವಾರ ಸಂಜೆಯ ವೇಳೆ ಸುಮಾರು 1500 ಎಕರೆಯಷ್ಟು ಕೃಷಿ ಕ್ಷೇತ್ರ ಜಲಾವೃತಗೊಂಡಿದೆ. ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕೃಷಿ ಕ್ಷೇತ್ರ ಮುಳುಗಡೆಯಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ, ‘ಮಳೆ ಇದೇ ರೀತಿ ಮುಂದುವರಿದಲ್ಲಿ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇಲ್ಲಿಯ ಜನ ಜೀವನಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದಿಲ್ಲೇ ಇಲ್ಲಿಯ ಪರಿಸ್ಥಿತಿಯ ಮೇಲೆ ಸತತ ನಿಗಾ ಇಟ್ಟಿದ್ದೇವೆ’ ಎಂದರು. ನಗರದ ವಿವಿಧ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ನೀರು ನಿಂತಿದೆ. ಇಲ್ಲಿಯ ಧುಂಡಶಿ ನಗರದಲ್ಲಿ ರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ನಿಂತು ಸಮಸ್ಯೆ ಉಂಟಾಗಿದ್ದರೆ ಲಯನ್ಸ್ ನಗರ, ಇನ್ನಿತರ ಕೆಲ ಕಡೆಗಳಲ್ಲಿ ಇದೇ ಸ್ಥಿತಿ ಇತ್ತು.

ಮನೆಗಳಿಗೆ ಹಾನಿ: ತಾಲೂಕಿನ ನೆಗ್ಗು ಪಂಚಾಯಿತಿ ಕೊಡಗಿಬೈಲ್​ನಲ್ಲಿ ಹೊಳೆಯ ಕೋಡಿ ಒಡೆದು ಉಮಾನಂದ ಗೋವಿಂದ ಭಟ್ ಅವರ ಕೃಷಿ ಕ್ಷೇತ್ರದ ಮೇಲೆ, ಅಚನಳ್ಳಿ ಗ್ರಾಮದಲ್ಲಿ ಕೆರೆ ಕೋಡಿ ಒಡೆದು ಕಮಲಾಕರ ಜೋಗಿ ಅವರ ತೋಟಕ್ಕೆ, ಹುಲದೇವನಸರದ ಮಂಜುನಾಥ ಕೆರಿಯಾ ಗೌಡ ಅವರ ಭತ್ತಗದ್ದೆಗೆ ನೀರು ನುಗ್ಗಿದೆೆ. ಬನವಾಸಿಯಲ್ಲಿ ನಾಗವೇಣಿ ರೆಡ್ಡಿ ಅವರ ಮನೆ,ಇಂದಿರಾನಗದ ಪಿಯಾಬಿ ಹುಸೇನ್ ಸಾಬ್ ಅವರ ವಾಸ್ತವ್ಯದ ಮನೆ ಕುಸಿದು ಹಾನಿಯಾಗಿದೆ. ಸಾರಿಗೆ ಸಂಸ್ಥೆ 30 ಲಕ್ಷ ರೂ.ಗಳಷ್ಟು ಹಾನಿ: ಭರ್ಜರಿ ಮಳೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಂದಾಜು 30 ಲಕ್ಷ ರೂ.ಗಳಷ್ಟು ಹಾನಿ ಅನುಭವಿಸಿದೆ. ಎರಡು ದಿನಗಳ ಕಾಲ ಯಾವ ಬಸ್​ಗಳು ಎಲ್ಲೆಲ್ಲಿ ನಿಂತು ಹೊಳೆ ನೀರು ಇಳಿಯುವುದನ್ನು ಕಾಯುತ್ತಿದೆ ಎಂಬುದು ಅಧಿಕಾರಿಗಳಿಗೂ ಗೊತ್ತಾಗದಂತಾಗಿತ್ತು. ಅಂಕೋಲಾ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿರುವುದರಿಂದಾಗಿ ಈ ಭಾಗದಲ್ಲಿ ಸಂಚರಿಸಬೇಕಿದ್ದ ಬಸ್​ಗಳು ಯಲ್ಲಾಪುರ ಬಸ್ ನಿಲ್ದಾಣದಲ್ಲಿ, ಅಂಕೋಲಾ ಬಸ್ ನಿಲ್ದಾಣದಲ್ಲಿ ನಿಲ್ಲುವಂತಾಗಿತ್ತು. ಶಿರಸಿಯಿಂದ ಕುಮಟಾಕ್ಕೆ ತೆರಳುವ ಬಸ್​ಗಳನ್ನು ನೀಲೇಕಣಿಯಲ್ಲಿಯೇ ಪೊಲೀಸರು ತಡೆಹಿಡಿದಿದ್ದರು. ಹಲವು ಬಸ್​ಗಳು ಮೊಬೈಲ್ ಸಿಗ್ನಲ್ ಸಿಗದ ಸ್ಥಳದಲ್ಲಿ ನಿಂತಿದ್ದರಿಂದ ಅಧಿಕಾರಿಗಳೂ ಆತಂಕ ಎದುರಿಸುವ ಸ್ಥಿತಿ ಉಂಟಾಗಿತ್ತು. ಉತ್ತರ ಕರ್ನಾಟಕದಿಂದ ಕರಾವಳಿ ಮತ್ತು ಮಂಗಳೂರಿಗೆ ಪ್ರತಿ ದಿನ 300ಕ್ಕೂ ಅಧಿಕ ಬಸ್​ಗಳು ತೆರಳುತ್ತಿದ್ದು, ಎಲ್ಲವೂ ದಾರಿಯಲ್ಲಿ, ಬಸ್ ನಿಲ್ದಾಣದಲ್ಲಿ ನಿಲ್ಲುವಂತಾಗಿತ್ತು. ರಾತ್ರಿಯಿಡೀ ಅಧಿಕಾರಿಗಳ ಓಡಾಟ !: ಯಾವ ಬಸ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚುವ ಸಲುವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ರಾತ್ರಿಯಿಡೀ ತಿರುಗಾಟ ನಡೆಸಿದ್ದಾರೆ. ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿಬಾಬು ಅವರನ್ನೂ ಒಳಗೊಂಡಂತೆ ಅಧಿಕಾರಿಗಳು ಓಡಾಟ ನಡೆಸಿದ್ದಾರೆ. ಎರಡು ದಿನಗಳ ಕಾಲ ಪ್ರಯಾಣಿಕರು, ಬಸ್ ಚಾಲಕರು ಹರಸಾಹಸ ಪಡುವಂತಾಯಿತು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا