Urdu   /   English   /   Nawayathi

ಅಘನಾಶಿನಿ, ಬಡಗಣಿ, ಚಂಡಿಕಾ ನದಿ ತೀರದಲ್ಲಿ ಪ್ರವಾಹ ಸ್ಥಿತಿ

share with us

ಕುಮಟಾ: 07 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕಳೆದ ಎರಡು ದಿನಗಳಿಂದ ವಿಪರೀತ ಮಳೆಯಾಗುತ್ತಿದ್ದು, ಅಘನಾಶಿನಿ, ಚಂಡಿಕಾ ಹಾಗೂ ಬಡಗಣಿ ಹೊಳೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಘಟ್ಟದ ಮೇಲ್ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ನದಿಯಲ್ಲಿ ರಭಸದಿಂದ ನೀರು ಹರಿದು ಬರುತ್ತಿದೆ. ಅಘನಾಶಿನಿ ನದಿಯಂಚಿನ ದಿವಗಿ, ಹೆಗಡೆ, ಮಿರ್ಜಾನದ ಕಲ್ಮಟ್ಟಿ, ಮಣಕೋಣ ಗ್ರಾಮಗಳಲ್ಲಿ ಸೋಮವಾರ ಸಂಜೆ ಹೊತ್ತಿಗೆ ಮನೆಯಂಗಳಗಳಿಗೆ ನದಿಯ ನೀರು ಬಂದಿದೆ. ತಾರಿಬಾಗಿಲ ರಸ್ತೆ ಮುಳುಗಿದೆ. ರಾತ್ರಿ ಖಂಡಿತವಾಗಿಯೂ ಜನರಿಗೆ ಪ್ರವಾಹ ಸ್ಥಿತಿ ಎದುರಾಗಬಹುದು. ಹೀಗಾಗಿ ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ, ತಹಸೀಲ್ದಾರ್ ಇನ್ನಿತರ ಅಧಿಕಾರಿಗಳು ಭೇಟಿ ನೀಡಿ ಜನರಿಗೆ ಮನೆ ಬಿಡಲು ಸಲಹೆ ನೀಡಿದ್ದಾರೆ. ಗಂಜಿಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಮುಳುಗಡೆ ಪ್ರದೇಶದ ಜನರು ಅಪಾಯವನ್ನು ಎಳೆದುಕೊಳ್ಳದೇ ಸಾಧ್ಯವಾದಷ್ಟು ಶೀಘ್ರದಲ್ಲಿ ಗಂಜಿಕೇಂದ್ರ ಸೇರಿಕೊಳ್ಳುವಂತೆ ಸೂಚಿಸಲಾಗಿದೆ. ಕತಗಾಲ ಬಳಿ ಭಾರಿ ಮಳೆಯಿಂದಾಗಿ ಚಂಡಿಕಾ ಹೊಳೆ ತುಂಬಿ ಕುಮಟಾ-ಶಿರಸಿ ರಸ್ತೆಯ ಮೇಲೆ ಹರಿಯುತ್ತಿದ್ದು ಜನ, ವಾಹನ ಸಂಚಾರಕ್ಕೆ ಸ್ವಲ್ಪ ಅಡಚಣೆ ಉಂಟಾಗಿದೆ. ದ್ವಿಚಕ್ರ, ತ್ರಿಚಕ್ರ ಇನ್ನಿತರ ಚಿಕ್ಕ ವಾಹನಗಳು ದಾಟುವುದು ಕಷ್ಟವಾಗಿದೆ. ಇನ್ನೂ ಎರಡು ಅಡಿಗಳಷ್ಟು ನೀರು ಏರಿದರೆ ಕುಮಟಾ ಹಾಗೂ ಶಿರಸಿ ನಡುವಿನ ರಸ್ತೆ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ಹಾಗೆಯೇ ಉಪ್ಪಿನಪಟ್ಟಣದಲ್ಲಿ ಶಿರಗುಂಜಿ ರಸ್ತೆಗೆ ಅಡ್ಡಲಾಗಿ ಇರುವ ಹಳೆಯ ಸೇತುವೆಯ ಮೇಲೆ ನದಿ ಹರಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا