Urdu   /   English   /   Nawayathi

ಆರ್ಟಿಕಲ್ 370 ರದ್ದು.. ಅಂಗಿ ಹರಿದುಕೊಂಡು ಪ್ರತಿಭಟಿಸಿದ ಪಿಡಿಪಿ ಸಂಸದರು ಹೊರಕ್ಕೆ

share with us

ನವದೆಹಲಿ: 05 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆ ಮಾಡಿದ್ದು ರಾಜ್ಯಸಭೆಯಲ್ಲಿ ಕೋಲಾಹಲ ಉಂಟುಮಾಡಿದೆ. ಈ ವೇಳೆ ರಾಜ್ಯಸಬೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಇಬ್ಬರು ಪಿಡಿಪಿ ಸದಸ್ಯರನ್ನ ರಾಜ್ಯಸಭೆಯಿಂದ ಹೊರಹೋಗುವಂತೆ ಸೂಚಿಸಲಾಗಿದೆ.

370 ವಿಧಿ ರದ್ದುಗೊಳಿಸುವ ಘೋಷಣೆ ಮಾಡುತ್ತಿದ್ದಂತೆ ಪಿಡಿಪಿ ಸಂಸದರಾದ ನಾಜಿರ್ ಅಹ್ಮದ್ ಲವಾಯ್ ಮತ್ತು ಎಂ.ಎಂ.ಫಯಾಜ್ ಪ್ರತಿಭಟನೆ ನಡೆಸಿದ್ರು. ಈ ವೇಳೆ ಆಕ್ರೋಶಗೊಂಡಿದ್ದ ಎಂ.ಎಂ.ಫಯಾಜ್ ತೋಳಿಗೆ ಕಪ್ಪು ಪಟ್ಟಿ ಧರಿಸಿ ಬಟ್ಟೆ ಹರಿದುಕೊಂಡು ಪ್ರತಿಭಟಿಸಿದ್ರು. ಹೀಗಾಗಿ ಇಬ್ಬರು ಸಂಸದರನ್ನ ರಾಜ್ಯಸಭೆಯಿಂದ ಹೊರಹೋಗುವಂತೆ ಸೂಚಿಸಲಾಯ್ತು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا