Urdu   /   English   /   Nawayathi

ಕೆಟ್ಟ ಯೋಚನೆ ಬೇಡ, ಎಲ್ಲ ವಿಷಯಕ್ಕೂ ಧರ್ಮವನ್ನು ಎಳೆದು ತರಬೇಡಿ: ಇರ್ಫಾನ್ ಪಠಾಣ್

share with us

ನವದೆಹಲಿ: 05 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಜಮ್ಮು ಕಾಶ್ಮೀರದಲ್ಲಿರುವ ಇತರ ರಾಜ್ಯದ ಜನರು ಆದಷ್ಟು ಬೇಗ ವಾಪಸ್ ಬರಬೇಕು ಎಂದು ಹೇಳಿರುವ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಿರುವ ಜನರಿಗೆ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಣಜಿ ತಂಡದ ಆಟಗಾರ ಮತ್ತು ಸಲಹೆಗಾರರಾಗಿರುವ ಪಠಾಣ್ ಸೇರಿದಂತೆ 100 ಮಂದಿ ಕ್ರಿಕೆಟಿಗರಲ್ಲಿ ಜಮ್ಮು ಕಾಶ್ಮೀರದಿಂದ  ವಾಪಸ್ ಬರುವಂತೆ ಹೇಳಲಾಗಿದೆ.

Irfan Pathan@IrfanPathan

Both, my mind & heart are still back in Kashmir with Indian army & Indian Kashmiri brothers and sisters...

16.4K

4:58 PM - Aug 4, 2019

Twitter Ads info and privacy

1,515 people are talking about this

ಕಾಶ್ಮೀರ ವಿಷಯ ಬಗ್ಗೆ ಪ್ರತಿಕ್ರಿಯಿಸಿದ ಪಠಾಣ್, ನನ್ನ ಮನಸ್ಸು ಮತ್ತು ಹೃದಯ  ಕಾಶ್ಮೀರದಲ್ಲಿರುವ ಭಾರತೀಯ ಸೇನೆ ಮತ್ತು ಅಲ್ಲಿನ ಸಹೋದರ ಸಹೋದರಿಯರಿಗಾಗಿ ಮಿಡಿಯುತ್ತಿದೆ ಎಂದಿದ್ದಾರೆ. ಇದರ ನಂತರ ಇನ್ನೊಂದು ಟ್ವೀಟ್ ಮಾಡಿದ ಅವರು, ಅಮರನಾಥ ಯಾತ್ರೆಯನ್ನು ನಿಲ್ಲಿಸುವಂತೆ ಯಾತ್ರಿಕರಿಗೆ ಹೇಳಲಾಗಿದೆ. ಬೆದರಿಕೆ ಇರುವ ಕಾರಣವೇ ಯಾತ್ರೆ ನಿಲ್ಲಿಸಿ ಎಂದು ಹೇಳಿರುವುದು. ಅಲ್ಲಿ ಭದ್ರತಾ ವ್ಯವಸ್ಥೆ ಮಾಡಿಸಿದ್ದು ಅದಕ್ಕಾಗಿಯೇ. ನಿಮ್ಮ ಕೆಟ್ಟ ಯೋಚನೆಗಳನ್ನು ಬಿಡಿ. ಎಲ್ಲ ವಿಷಯಕ್ಕೂ ಧರ್ಮವನ್ನು ಎಳೆದು ತರಬೇಡಿ. ಎಲ್ಲದಕ್ಕೂ ಸಾಕ್ಷ್ಯ ಕೇಳಬೇಡಿ ಎಂದಿದ್ದಾರೆ.

Irfan Pathan@IrfanPathan

 · Aug 4, 2019

Both, my mind & heart are still back in Kashmir with Indian army & Indian Kashmiri brothers and sisters...

Irfan Pathan@IrfanPathan

The fact that have been asked to go back and stopped the means it is under threat. That's why security measures are taken. Apni gandi soch Badlo. Har baat mein religion mat daalo. Har baat mein saboot mat maango.

5,716

10:58 PM - Aug 4, 2019

Twitter Ads info and privacy

750 people are talking about this

ಇದಕ್ಕಿಂತ ಮುನ್ನ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಠಾಣ್, ನಮ್ಮ ಶಿಬಿರವನ್ನು ಮುಚ್ಚಿಸಿ, ಕ್ರಿಕೆಟಿಗರನ್ನು ಅವರವರ ಮನೆಗೆ ಕಳಿಸಲಾಗಿದೆ. ಜೂನ್ 14 ರಿಂದ ಜುಲೈ 14ರವರೆಗೆ ಶಿಬಿರ ನಡೆದಿದ್ದು 10 ದಿವಸಗಳ ವಿರಾಮ ನಂತರ  ಜುಲೈ 25ರಂದು ಪುನರಾರಂಭವಾಗಿತ್ತು. ಆಗಸ್ಟ್ 4ರಂದು ಸುಮಾರು 100 ಆಟಗಾರರನ್ನು ವಾಪಸ್ ಕಳಿಸಲಾಗಿತ್ತು ಎಂದಿದ್ದರು.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا