Urdu   /   English   /   Nawayathi

ಮೃತಪಟ್ಟಿದ್ದಾನೆ ಎಂದ ವೈದ್ಯರು.. ಶವಾಗಾರದಲ್ಲಿ ಎದ್ದು ಕುಳಿತ ರೋಗಿ

share with us

ಅಸ್ಸೋಂ: 03 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ವಿಚಿತ್ರ ಖಾಯಿಲೆಯಿಂದ ಬಳಲುತಿದ್ದ ವ್ಯಕ್ತಿಯೋರ್ವ ಸತ್ತಿದ್ದಾನೆ ಎಂದು ವೈದ್ಯರು ತಿಳಿಸಿದ ನಂತರ ಸಂಬಂಧಿಕರು ಶವಾಗಾರದಲ್ಲಿ ಮೃತದೇಹ ಪಡೆದುಕೊಳ್ಳುವ ವೇಳೆ ಎದ್ದು ಕೂತ ಘಟನೆ ಅಸ್ಸೋಂನ ತಿನ್​ಸುಕಿಯ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತಿದ್ದ ಮೊಹಮ್ಮದ್ ಹುಸೇನ್​ ಎಂಬ ವ್ಯಕ್ತಿ ತಿನ್​ಸುಕಿಯಾದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. 2 ದಿನಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರು, ಹುಸೇನ್​ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ವೈದ್ಯರ ಮಾಹಿತಿಯಂತೆ ಹುಸೇನ್​ ಸತ್ತಿದ್ದಾನೆ ಎಂದು ತಿಳಿದ ಆತನ ಸಂಬಂಧಿಕರು ಮೃತದೇಹ ಪಡೆದುಕೊಳ್ಳಲು ಶವಾಗಾರಕ್ಕೆ ತೆರಳಿದ್ದಾರೆ. ಈ ವೇಳೆ ಸತ್ತಿದ್ದಾನೆ ಎಂದುಕೊಂಡಿದ್ದ ಹುಸೇನ್​ ಎದ್ದು ಕೂತಿದ್ದಾನೆ ಎಂದು ಆತನ ಪತ್ನಿ ತಿಳಿಸಿದ್ದಾರೆ. ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ತನಿಖೆಗೆ ಒತ್ತಾಯಿಸಿದ್ದಾರೆ. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಅಧೀಕ್ಷಕರಾದ ಎನ್.ಸಿ.ಮಹಾಂತ ಅದೇ ದಿನ ಹುಸೇನ್​ ಎಂಬ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದರು. ಹೀಗಾಗಿ ಸ್ವಲ್ಪ ಗೊಂದಲ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا