Urdu   /   English   /   Nawayathi

ಸುವರ್ಣಾವತಿ ಜಲಾಶಯದಲ್ಲಿ ಆನೆ ಉಪಟಳ: ವಿದ್ಯುತ್​​​ ಕಂಬಗಳಿಗೇ ಶಾಕ್​​​ ಕೊಡ್ತಿದೆ ಒಂಟಿ ಸಲಗ!

share with us

ಚಾಮರಾಜನಗರ: 01 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಅವಳಿ ಜಲಾಶಯಗಳಲ್ಲೊಂದಾದ ಸುವರ್ಣಾವತಿ ಜಲಾಶಯದಲ್ಲಿ ಕೆಲವು ದಿನಗಳಿಂದ ಒಂಟಿ ಸಲಗ ದಾಂಧಲೆ ನಡೆಸುತ್ತಿದ್ದು, ಏರಿ ಮೇಲಿನ ವಿದ್ಯುತ್ ಕಂಬಗಳಿಗೆ ಹಾನಿ ಮಾಡುತ್ತಿದೆ. ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಕೆ.ಗುಡಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇದ್ದು, ಪ್ರತಿನಿತ್ಯ ವನ್ಯಜೀವಿಗಳು ಜಲಾಶಯಕ್ಕೆ ನೀರು ಕುಡಿಯಲು ಬರುತ್ತವೆ. ಆದರೆ, ಒಂಟಿ ಸಲಗವೊಂದು ಮಾತ್ರ ಜಲಾಶಯ ದಾಟಿ ಬಂದು ಏರಿ ಮೇಲೆ ಅಡ್ಡಾಡಿ ವಿದ್ಯುತ್ ಕಂಬಗಳನ್ನು, ವಿದ್ಯುತ್ ದೀಪದ ಪಿಲ್ಲರ್​​ಗಳನ್ನು ಉರುಳಿಸುತ್ತಿದೆ. ಜಲಾಶಯದ ಏರಿ ಸಮೀಪದಲ್ಲೇ ಅತಿಥಿ ಗೃಹವಿದ್ದು, ರಾತ್ರಿ ಅಥವಾ ಮುಂಜಾನೆ ಸಮಯ ನೀರಿನ ಮೋಟಾರ್ ಚಾಲು ಮಾಡಲು ಜಲಾಶಯದ ಬಳಿಯೇ ಹೋಗಬೇಕಿರುವುದರಿಂದ ಇಲ್ಲಿನ‌ ಸಿಬ್ಬಂದಿ ಪೀಕಲಾಟ ಅನುಭವಿಸುತ್ತಿದ್ದಾರೆ. ಈ ಕುರಿತು ಜಲಾಶಯದ ನೀರುಗಂಟಿ ರೆಹಮಾನ್ ಮಾತನಾಡಿ, ಸಂಜೆ-ಬೆಳಗ್ಗೆ ಯಾವ ಸಮಯದಲ್ಲಿ ಒಂಟಿ ಸಲಗ ಬರುತ್ತದೆ ಎಂದು ಹೇಳಲಾಗುತ್ತಿಲ್ಲ.‌ ನೀರಿನೊಳಗೆ ಬರುತ್ತದೆ. ಕೆಲವೊಮ್ಮೆ ಮುಳ್ಳುತಂತಿ ಬೇಲಿಯ ಕಂಬಗಳನ್ನು ನೆಲಕ್ಕುರುಳಿಸಿ ಬರಲಿದ್ದು, ವಿದ್ಯುತ್ ಕಂಬಗಳು ಅದರ ಕಣ್ಣಿಗೆ ಹೇಗೆ ಕಾಣುತ್ತದೆಯೋ ಏಕಾಏಕಿ ಎಲ್ಲವನ್ನೂ ಉರುಳಿಸಿ ಹೋಗುತ್ತಿದೆ. 26ಕ್ಕೂ ಹೆಚ್ಚು ಕಂಬಗಳು ಈಗ ನೆಲಕ್ಕುರಳಿವೆ. ಅರಣ್ಯ ಇಲಾಖೆಗೆ ಫೋಟೋ ಸಮೇತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಜೆ ಸಮಯ ಜಲಾಶಯದ ಬಳಿ ತೆರಳಲು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು. ಭಯದ ವಾತಾವರಣ ಸೃಷ್ಟಿಸಿರುವ ಒಂಟಿ ಸಲಗವನ್ನು ಜಲಾಶಯದ ಏರಿ ಮೇಲೆ ಬರದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದ್ದು, ಸೌರ ಬೇಲಿಯನ್ನಾದರೂ ಅಳವಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಿದೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا