Urdu   /   English   /   Nawayathi

ಉನ್ನಾವ್ ಅತ್ಯಾಚಾರ ಸಂತ್ರಸ್ಥೆಗೆ 25 ಲಕ್ಷ ರೂ. ಪರಿಹಾರ, ಸಿಆರ್ ಪಿಎಫ್ ಭದ್ರತೆ ನೀಡಿ: ಸುಪ್ರೀಂ ಕೋರ್ಟ್

share with us

ನವದೆಹಲಿ: 01 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ನಿರೀಕ್ಷೆಯಂತೆಯೇ ಉನ್ನಾವ್ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸಿಬಿಐ ಕೋರ್ಟ್ನಿಂದ ದೆಹಲಿ ಸಿಬಿಐ ಕೋರ್ಟ್ ಗೆ ವರ್ಗಾವಣೆ ಮಾಡಿದೆ. ಪ್ರಕರಣದ ಸಂತ್ರಸ್ಥರ ಮೇಲೆ ನಡೆದ ಅಪಘಾತವನ್ನು ಗಂಭೀವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಇಂದು ಬೆಳಗ್ಗೆಯಷ್ಟೇ ಅಫಘಾತಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು 7 ದಿನಗಳೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕು ಎಂದು ಹೇಳಿತ್ತು. ಅಂತೆಯೇ ಇದರ ಮುಂದುವರೆದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಇದೀಗ ಉನ್ನಾವ್ ಅತ್ಯಾಚಾರಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಉತ್ತರ ಪ್ರದೇಶ ಸಿಬಿಐ ಕೋರ್ಟ್ನಿಂದ ದೆಹಲಿ ಸಿಬಿಐ ಕೋರ್ಟ್ಗೆ ವರ್ಗಾವಣೆ ಮಾಡಿದೆ. ಈ ಪೈಕಿ ಸಂತ್ರಸ್ಥೆಯ ಮೇಲಿನ ಅಪಘಾತದ ಬಳಿಕ ದಾಖಲಾಗಿದ್ದ 9 ಕೊಲೆ ಪ್ರಕರಣ, ಅತ್ಯಾಚಾರ ಪ್ರಕರಣದ ಸಾಕ್ಷ್ಯನಾಶ ಪ್ರಕರಣ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಪ್ರಕರಣ ಕೂಡ ಸೇರಿದೆ ಎನ್ನಲಾಗಿದೆ. ಅಲ್ಲದೆ ಎಲ್ಲ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಅಂತಿಮ ಗುಡುವು ಕೂಡ ನೀಡಿದ್ದು, 45 ದಿನಗಳೊಳಗೆ ವಿಚಾರಣೆ ಪೂರ್ಣ ಮಾಡುವಂತೆ ಹೇಳಿದೆ. ಅಲ್ಲದೆ ಎಲ್ಲ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಅಂತಿಮ ಗುಡುವು ಕೂಡ ನೀಡಿದ್ದು, 45 ದಿನಗಳೊಳಗೆ ವಿಚಾರಣೆ ಪೂರ್ಣ ಮಾಡುವಂತೆ ಹೇಳಿದೆ. ಅಲ್ಲದೆ ಸಂತ್ರಸ್ಥೆಯ ತಂದೆಯ ವಿರುದ್ಧ ದಾಖಲಾಗಿದ್ದ ಅಕ್ರಮ ಶಾಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಸುಳ್ಳು ಪ್ರಕರಣದ ವಿಚಾರಣೆ, ಪೊಲೀಸ್ ಕಸ್ಟಡಿಯಲ್ಲೇ ಸಂತ್ರಸ್ಥೆಯ ತಂದೆ ಸಾವನ್ನಪ್ಪಿದ ಪ್ರಕರಣ, ಸಂತ್ರಸ್ಥೆಯ ತಾಯಿ ದಾಖಲಿಸಿದ್ದ ದೂರಿನ ಮೇರೆಗೆ ಚಾರ್ಜ್ ಶೀಟ್ ದಾಖಲಿಸದ ಪೊಲೀಸರ ಕ್ರಮದ ವಿರುದ್ಧದ ಪ್ರಕರಣ, ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ಥೆಯ ಮೇಲೆ ಶಾಸಕ ಕುಲ್ ದೀಪ್ ಸಿಂಗ್ ಸೆಂಗಾರ್ ರಿಂದ ಮತ್ತೆ ಅತ್ಯಾಚಾರ ಮತ್ತು ಸಂತ್ರಸ್ಥೆಯೂ ಸೇರಿದಂತೆ ಅವರ ಕುಟುಂಬಸ್ಥರ ಮೇಲೆ ನಡೆದ ಅಪಘಾತ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣವನ್ನೂ ಸುಪ್ರೀಂ ಕೋರ್ಟ್ ದೆಹಲಿ ಸಿಬಿಐ ಕೋರ್ಟ್ ಗೆ ವರ್ಗಾವಣೆ ಮಾಡಿದೆ.

ಸಂತ್ರಸ್ಥೆಗೆ ಪರಿಹಾರ, ಸಂತ್ರಸ್ಥೆಯ ಪರ ವಕೀಲರಿಗೆ ಹೆಚ್ಚುವರಿ ಭದ್ರತೆ

ಇದೇ ವೇಳೆ ಉನ್ನಾವ್ ಅತ್ಯಾಚಾರ ಸಂತ್ರಸ್ಥ ಯುವತಿಗೆ ಪರಿಹಾರ ನೀಡುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಉನ್ನಾವೋದಲ್ಲಿರುವ ಸಂತ್ರಸ್ಥ ಕುಟುಂಬದ ಪ್ರತೀಯೊಬ್ಬರಿಗೂ ರಕ್ಷಣೆ ಒದಗಿಸಬೇಕು ಎಂದು ಹೇಳಿದೆ. ಅಲ್ಲದೆ ಸಂತ್ರಸ್ಥೆಯ ಪರ ವಕೀಲರಿಗೂ ರಕ್ಷಣೆ ನೀಡುವಂತೆ ಮತ್ತು ಮಧ್ಯಂತರ ಪರಿಹಾರವಾಗಿ 25 ಲಕ್ಷ ರೂ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೋರ್ಟ್ ಹೇಳಿದೆ. 

ಏನಿದು ಪ್ರಕರಣ?

ಉನ್ನಾವೊ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಂಗಾರ್ವೌ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಲದೀಪ್ ಸಿಂಗ್ ಸೆಂಗಾರ್ ತಮ್ಮ ಬಳಿ ಕೆಲಸ ಕೇಳಿಕೊಂಡು ಬಂದ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಜೂನ್ 4, 2017 ರಂದು ತಮ್ಮ ನಿವಾಸದಲ್ಲಿ ಅತ್ಯಾಚಾರ ಎಸಗಿದ್ದರು. ಕಳೆದ ವರ್ಷ ಸಿಬಿಐ ಪೊಲೀಸರಿಂದ ಬಂಧನಕ್ಕೊಳಗಾದ ಸೆಂಗಾರ್ ಸೀತಾಪುರ ಜೈಲಿನಲ್ಲಿದ್ದರು. ಪ್ರಕರಣ ಸಂಬಂಧ ವಿಚಾರಣೆ ಕೋರ್ಟ್ ಹಂತದಲ್ಲಿರುವಂತೆಯೇ ಅತ್ಯಾಚಾರ ಸಂತ್ರಸ್ಥೆ ಮತ್ತು ಆಕೆಯ ಕುಟುಂಬಸ್ಥರು ಅಪಘಾತಕ್ಕೊಳಗಾಗಿದ್ದಾರೆ. 19 ವರ್ಷದ ಅತ್ಯಾಚಾರ ಸಂತ್ರಸ್ಥೆ ಹಾಗೂ ಅವರ ಕುಟುಂಬ, ವಕೀಲರು ಪ್ರಯಾಣಿಸುತ್ತಿದ್ದ ಕಾರು ರಾಯ್ ಬರೇಲಿಯಲ್ಲಿ ಟ್ರಕ್ ಗೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದರು. ಅಲ್ಲದೆ ಘಟನೆಯಲ್ಲಿ ಸಂತ್ರಸ್ಥೆ ಹಾಗೂ ಅವಳ ವಕೀಲರು ಗಂಭೀರ ಗಾಯಗೊಂಡಿದ್ದಾರೆ. ಇದು ಉದ್ದೇಶಪೂರ್ವರ ಅಪಘಾತ ಎಂದು ಶಂಕಿಸಲಾಗಿದ್ದು, ಇದೇಕಾರಣಕ್ಕೆ ಜೈಲಿನಲ್ಲಿರುವ ಬಿಜೆಪಿ ಶಾಸಕ ಸೆಂಗಾರ್ ಮತ್ತು ಇತರ 9 ಮಂದಿಯ ಮೇಲೆ ಸೋಮವಾರ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮತ್ತು ಆಕೆಯ ವಕೀಲರು ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡೂ ರೋಗಿಗಳ ಆರೋಗ್ಯ ಸ್ಥಿರವಾಗಿದೆ. ಆದರೂ ಅವರು ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನು ಅಪಘಾತಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸೆಂಗಾರ್ ಮತ್ತು ಇತರ ಒಂಬತ್ತು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಮಂಗಳವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಗಿತ್ತು. ಅಪಘಾತದ ಬಳಿಕ ಈ ವಿಚಾರ ತೀವ್ರ ವಿವಾದಕ್ಕೊಳಗಾದ ಹಿನ್ನೆಲೆಯಲ್ಲಿ ಸೆಂಗಾರ್ ಅವರನ್ನು ಬಿಜೆಪಿ ಪಕ್ಷದಿಂದಲೇ ಅಮಾನತು ಮಾಡಿ ಆದೇಶ ಹೊರಡಿಸಿದೆ. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا