Urdu   /   English   /   Nawayathi

ಒಳಚರಂಡಿಗೆ ಇಳಿದ ಪೌರಕಾರ್ಮಿಕ: ಕಣ್ಣು‌ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು

share with us

ಹುಬ್ಬಳ್ಳಿ: 29 ಜುಲೈ 2019 (ಫಿಕ್ರೋಖಬರ್ ಸುದ್ದಿ) ಒಂದಲ್ಲಾ ಒಂದು ಯಡವಟ್ಟಿನಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸುದ್ದಿಯಲ್ಲಿರುವುದು ಸಾಮಾನ್ಯವಾಗಿದೆ. ನಗರದ ಒಳಚರಂಡಿಯ ಮ್ಯಾನ್ ಹೋಲ್​ಗಳನ್ನು ಯಂತ್ರಗಳಿದ್ದರೂ ಕಾರ್ಮಿಕರೇ ಇಳಿದು ಸ್ವಚ್ಛಗೊಳಿಸಲು ಮುಂದಾದ ಘಟನೆ ನಗರದ ಮೂರು ಸಾವಿರ ಮಠದ ರಸ್ತೆಯಲ್ಲಿ ನಡೆದಿದೆ. ಒಳಚರಂಡಿಯ ಸ್ವಚ್ಛಗೊಳಿಸಲು ಯಂತ್ರಗಳ‌ ಬಳಸಬೇಕು, ಯಾವುದೇ ವ್ಯಕ್ತಿ ಮ್ಯಾನಹೋಲ್​ನಲ್ಲಿ ಇಳಿದು‌ ಸ್ವಚ್ಛಗೊಳಿಸಬಾರದು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಆದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಯಂತ್ರಗಳನ್ನು ಬಳಸಿಕೊಳ್ಳದೇ, ನಗರದಲ್ಲಿ ಮ್ಯಾಲ್​ಹೋಲ್​ಗಳಲ್ಲಿ ಕಾರ್ಮಿಕರೇ ಇಳಿದು ಕ್ಲೀನ್ ಮಾಡುತ್ತಿರುವುದು ಅಮಾನವೀಯ ಕೃತ್ಯ. ಮಹಾನಗರ ಪಾಲಿಕೆಯ ಆಯುಕ್ತರಾದ ಸುರೇಶ್​ ಇಟ್ನಾಳ್​ ಅಧಿಕಾರವಹಿಸಿಕೊಂಡಾಗ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂಬ ವಾಗ್ದಾನ ಸಹ ಮಾಡಿದ್ದರು. ಈಗ ನಗರದ ಹೃದಯ ಭಾಗದಲ್ಲಿ ಪಾಲಿಕೆಯ ಕಾರ್ಮಿಕ ಮ್ಯಾನ್​ಹೋಲ್‌ನಲ್ಲಿ ಇಳಿದು ಸ್ವಚ್ಛ ಮಾಡುತ್ತಿದ್ದು ಎಷ್ಟು ಸರಿ ಇದಕ್ಕೆ ಆಯುಕ್ತರೇ ಉತ್ತರ ಕೊಡಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಮಾಹಿತಿ ಇದ್ರೂ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನೂ ಮುಂದಾದ್ರೂ ಪಾಲಿಕೆ ಅಧಿಕಾರಿಗಳು ಇಂತಹ ಘಟನೆಗಳು ಆಗದ ಹಾಗೇ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا