Urdu   /   English   /   Nawayathi

ಫಿಲಿಫೈನ್ಸ್ ನಲ್ಲಿ ಪ್ರಬಲ ಭೂಕಂಪ: 8 ಸಾವು, 60 ಮಂದಿಗೆ ಗಾಯ

share with us

ಮನಿಲಾ: 28 ಜುಲೈ 2019 (ಫಿಕ್ರೋಖಬರ್ ಸುದ್ದಿ) ಫಿಲಿಪೈನ್ಸ್‌ನ ಮುಖ್ಯ ಲುಪನ್ ದ್ವೀಪದ ಉತ್ತರದ ಬಟಾನೆಸ್ ಬಳಿ ಶನಿವಾರ ರಾತ್ರಿ ಸಂಭವಿಸಿದ ಅವಳಿ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ ಈ ಘಟನೆಯಲ್ಲಿ ಇತರೆ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ಸಂಭವಿಸಿದ 5.4 ತೀವ್ರತೆಯ ಮೊದಲ ಭೂಕಂಪದಲ್ಲಿ ಐವರು ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗಳಾಗಿವೆ ಎಂದು ಬಟಾನೆಸ್ ಗವರ್ನರ್ ಮರಿಲೌ ಸೈಕೊ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕಂಪನದಿಂದ ಚರ್ಚ್ ಮತ್ತು ಇತರ ಮನೆಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅವರು ಹೇಳಿದರು. 6.4 ತೀವ್ರತೆಯ ಎರಡನೇ ಭೂಕಂಪನ ಇಟ್ಬಯತ್‌ನ ವಾಯುವ್ಯಕ್ಕೆ 19 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದೂ ವರದಿಯಾಗಿದೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا