Urdu   /   English   /   Nawayathi

ಅಜೆರ್ಬೈಜಾನ್ ಲಂಕನ್ ಬಂದರು ಸಮೀಪ ಮುಳುಗಿದ ಹಡಗು: ರಕ್ಷಿಸಲ್ಪಟ್ಟವರಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ

share with us

ಬಾಕು(ಅಜೆರ್ಬೈಜಾನ್): 27 ಜುಲೈ 2019 (ಫಿಕ್ರೋಖಬರ್ ಸುದ್ದಿ) ಇಲ್ಲಿನ ಅಸ್ಟಾರಾ ಬಂದರು ಸಮೀಪ ಇರುವ ಲಂಕರನ್ ಬಂದರು ಹತ್ತಿರ ಹೋಗುತ್ತಿದ್ದ ಶಬಹಂಗ್ ಎಂಬ ಇರಾನ್ ಹಡಗಿನಲ್ಲಿದ್ದ ಇಬ್ಬರು ಭಾರತೀಯರನ್ನು ಇರಾನ್ನ  ಉಳಿದ 7 ಸಿಬ್ಬಂದಿಗಳ ಜೊತೆ ರಕ್ಷಿಸಲಾಗಿದೆ ಎಂದು ಇರಾನ್ ಬಂದರು ಮತ್ತು ಮೆರಿಟೈಮ್ ಸಂಘಟನೆಯ ಉಪ ಮುಖ್ಯಸ್ಥರು ತಿಳಿಸಿದ್ದಾರೆ. ಅಜೆರ್ಬೈಜಾನ್ ಬಂದರು ಅಕಾಡೆಮಿಯಿಂದ ಸಿಬ್ಬಂದಿಯನ್ನು ರಕ್ಷಿಸಲು ಸಹಾಯ ಕೋರಿ ಎರಡು ಹೆಲಿಕಾಪ್ಟರ್ ಮತ್ತು ಗಸ್ತುಪಡೆ ಹಡಗಿನ ನೆರವಿನಿಂದ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಂದು ಇರಾನ್ನ ಸುದ್ದಿ ಸಂಸ್ಥೆ ಇರ್ನಾ ವರದಿ ಮಾಡಿದೆ. ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಅಜೆರಿ ನೀರಿನಲ್ಲಿ ಹಡಗು ಮುಳುಗಿ ಹೋಗಿದೆ. ಸಮುದ್ರದಲ್ಲಿನ ನೀರು ಸೋರುವಿಕೆಯಿಂದ ಹಡಗು ಮುಳುಗಿತು ಎಂದು ಇರಾನ್ ನ ಅಧಿಕಾರಿ ಜಲಿಲ್ ಎಸ್ಲಮಿ ತಿಳಿಸಿದ್ದಾರೆ. ಟೈಲ್ಸ್ ನ್ನು ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಇರಾನ್ ನ ಅಂಜಲಿ ಬಂದರಿನಿಂದ ರಷ್ಯಾದ ಮಖಚ್ಕಲಾಕ್ಕೆ ಸಂಚಾರ ಬೆಳೆಸುತ್ತಿತ್ತು. 

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا