Urdu   /   English   /   Nawayathi

ಸಾಕಿದವರನ್ನೇ ಅತೃಪ್ತರು ಬಿಡ್ಲಿಲ್ಲ ಇನ್ನು ಯಡಿಯೂರಪ್ಪನವರನ್ನ ಬಿಡ್ತಾರಾ? ಡಿಕೆಶಿ ವ್ಯಂಗ್ಯ

share with us

ಬೆಂಗಳೂರು: 25 ಜುಲೈ 2019 (ಫಿಕ್ರೋಖಬರ್ ಸುದ್ದಿ) ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವಾಗ 15-17 ಮಂದಿಯಲ್ಲಿ, ಕುಮಟಳ್ಳಿ ಅವರನ್ನು ಬಿಟ್ಟರೆ ಮಿಕ್ಕ ಯಾರೂ ಸುಮ್ಮನೆ ಬಿಡಲ್ಲ. ಯಡಿಯೂರಪ್ಪನವರ ಪ್ಯಾಂಟು-ಶರ್ಟು ಹರಿದು ಹಾಕಿಬಿಡ್ತಾರೆ ಎಂದು ಕಾಂಗ್ರೆಸ್​ ನಾಯಕ ಡಿ ಕೆ ಶಿವಕುಮಾರ್​ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸರ್ಕಾರ ರಚನೆ ವಿಚಾರವಾಗಿ ಮಾತನಾಡಿದ ಅವರು, ಒಬ್ಬ ಜೇಬು, ಇನ್ನೊಬ್ಬ ಪ್ಯಾಂಟು, ಮತ್ತೊಬ್ಬ ಶರ್ಟು, ಮುತ್ತು-ರತ್ನಗಳನ್ನು ಒಬ್ಬೊಬ್ಬರು ಕಿತ್ತಾಕಿ ಬಿಡುತ್ತಾರೆ. ಇದು ಅವರಿಗೆ ಗೊತ್ತಿಲ್ಲ. ಒಬ್ಬನಿಗೆ ಬೆಂಗಳೂರು ನಗರ, ಒಬ್ಬನಿಗೆ ಪವರ್, ನೀರಾವರಿ, ಲೋಕೋಪಯೋಗಿ ಬೇಕು. ಅರಣ್ಯ, ರೆವೆನ್ಯೂ ಎಲ್ಲಾ ಒಬ್ಬೊಬ್ಬರು ಹಂಚಿಕೊಂಡು ಕುಳಿತಿದ್ದಾರೆ. ಎಲ್ಲಾ ಶಾಸಕರ ಜತೆಗೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರೆ ಮಾತ್ರ ಉಳಿದುಕೊಳ್ಳುತ್ತಾರೆ. ಇಲ್ಲವಾದರೆ ಗೋವಿಂದಾ ಗೋವಿಂದ ಎಂದು ಹಾಸ್ಯ ಚಟಾಕಿ ಹಾರಿಸಿದರು. ನನಗೆ ಯಾವುದೇ ಪ್ಲಸ್ಸೂ ಬೇಡ, ಮೈನಸ್ಸೂ ಬೇಡ. ಸರಳವಾಗಿ ಹೇಳಬೇಕೆಂದರೆ ಯಾವುದೇ ಪಕ್ಷ ಸರ್ಕಾರ ರಚಿಸಲು 224 ರಲ್ಲಿ 113 ಮಂದಿ ಇದ್ದರೆ ಸರ್ಕಾರ ರಚಿಸಬಹುದು. ಶಾಸಕರ ರಾಜೀನಾಮೆ ಸ್ವೀಕಾರವಾಗಿದೆಯೋ, ಅಲ್ಲಾ ಅನರ್ಹಗೊಂಡಿದ್ದಾರೋ ಅದರ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ. ಸ್ಪೀಕರ್​ಗೆ ಇರುವ ಪರಮಾಧಿಕಾರವನ್ನು ಸುಪ್ರೀಂ ಕೋರ್ಟ್​ಗೆ ನಾವು ಪ್ರಶ್ನಿಸಲು ಸಾಧ್ಯವೇ? ನನಗೆ ತಿಳಿದ ವಿಚಾರವನ್ನು ನಾನು ಹೇಳಿದ್ದೇನೆ. ರಾಜ್ಯಪಾಲರು ಕರೆದು ಬಹುಮತ ಸಾಬೀತುಪಡಿಸಿ ಎಂದು ಕಾಲಮಿತಿ ನೀಡಿ, ಬಹುಮತ ಸಾಬೀತುಪಡಿಸಲು ಹೇಳುತ್ತಾರೆ. ಶಾಸಕರನ್ನು ಸಾಕಷ್ಟು ಶ್ರಮ ಪಟ್ಟು ಗೆಲ್ಲಿಸಿದ್ದರು. ನಮ್ಮ, ಕಾರ್ಯಕರ್ತರ, ಜನರ ಬೆಂಬಲದಿಂದ ಗೆದ್ದಿದ್ದರು. ಅವರನ್ನೇ ಬಿಡದ ಶಾಸಕರು, ಯಡಿಯೂರಪ್ಪನವರನ್ನು ಬಿಡುತ್ತಾರಾ? ಹಾಗೆಯೇ ಅದುಮಿಕೊಂಡು ಬಿಡುತ್ತಾರೆ. ಪ್ರತಿಪಕ್ಷದ ನಾಯಕ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಾವು ಆಕಾಂಕ್ಷಿಯಾಗಿದ್ದೀರಾ ಎನ್ನುವ ಪ್ರಶ್ನೆಗೆ ನನಗೆ ಯಾವುದೇ ವಿಶೇಷ ಸ್ಥಾನಮಾನ ಬೇಡ. ಸಿಕ್ಕಿರುವುದರಲ್ಲೇ ತೃಪ್ತಿ ಇದೆ. ಪಕ್ಷ ಮಂತ್ರಿ ಸ್ಥಾನ ನೀಡಿತ್ತು. ಅದು ಹೋಯ್ತು. ಸದ್ಯ ಕ್ಷೇತ್ರದ ಜನ ನನಗೆ ಸೂಕ್ತ ಸ್ಥಾನ ಕೊಟ್ಟಿದ್ದಾರೆ. ನಾನು ಸಮಾಧಾನವಾಗಿ ಇದ್ದೇನೆ. ನನ್ನ ಬಳಿ ಅಧಿಕಾರ ಇಲ್ಲದಿದ್ದರೂ ಇಷ್ಟೊಂದು ಜನ ಬಂದಿದ್ದಾರಲ್ಲಾ ಸಾಕು ಎಂದರು. ಸ್ಪೀಕರ್, ನ್ಯಾಯಾಲಯ ಬಿಟ್ಟು ಬೇರೇನಾದರೂ ಇದ್ದರೆ ಮಾತನಾಡುತ್ತೇನೆ. ಏಕೆಂದರೆ ಕಾನೂನಾತ್ಮಕ ಸಂಸ್ಥೆಗಳ ವಿಚಾರದಲ್ಲಿ ನಾನು ಯಾವುದೇ ವಿಚಾರ ಮಾತನಾಡುವುದಿಲ್ಲ ಎಂದರು. ನಾನು ಅತೃಪ್ತನಲ್ಲ, ಸಂತೃಪ್ತ. ಸಂಪೂರ್ಣ ನಾನು ಏನೇನು ಹೇಳಬೇಕೋ ಅದನ್ನು ನಮ್ಮ ಪಕ್ಷದ ಸಭೆಯಲ್ಲಿ ಹೇಳಿದ್ದೇನೆ. ಈಗ ನಾನು ಮಾತನಾಡಲು ಹೋಗಲ್ಲ. ಸಿದ್ದರಾಮಯ್ಯ ಸಿಎಲ್​ಪಿ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಇದ್ದಾರೆ. ಅವರು ಏನು ಹೇಳುತ್ತಾರೋ, ಪಕ್ಷ ಏನು ತಿಳಿಸುತ್ತದೆಯೋ ಅದರ ಬಗ್ಗೆ ಮಾತನಾಡುವುದಿಲ್ಲ. ಪಕ್ಷದ ನಾಯಕರು, ಅತೃಪ್ತರು ಏನು ಹೇಳಿದ್ದಾರೋ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಮೈತ್ರಿ ಹೈಕಮಾಂಡ್​ಗೆ ಬಿಟ್ಟದ್ದು...

ಪಕ್ಷದ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಸಿದ್ದು, ಅವರು ಹಾಗೂ ಪಕ್ಷದ ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ಅದರ ಪ್ರಕಾರ ನಾವು ಕೆಲಸ ಮಾಡುತ್ತೇವೆ. 14 ತಿಂಗಳು ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಮುಂದೆ ಜತೆಯಾಗಿ ಹೋರಾಡಬಹುದು. ಇಂದು ಸರ್ಕಾರ ಬಿದ್ದಿದೆ, ಈಗ ಅವರ ಜತೆ ಬಡಿದಾಡುವುದು, ಜಗಳ ಮಾಡುವುದು ಸರಿಯಲ್ಲ. ಮುಂದೆ ಜತೆಯಾಗಿಯೇ ಹೋರಾಡುತ್ತೇವೆ ಎಂದರು. ಈಗ ಬದಲಾದರೆ ಜನ ಉಗಿಯುತ್ತಾರೆ ಅಷ್ಟೆ. ನಮ್ಮ ಪಕ್ಷದ ನಾಯಕರು, ಮಾಜಿ ಪ್ರಧಾನಿ ದೇವೇಗೌಡರು ಜತೆಯಾಗಿ ಮಾತನಾಡುತ್ತಾರೆ. ಅವರಿಬ್ಬರು ಕೂತು ಕೈಗೊಳ್ಳುವ ನಿರ್ಧಾರ ಪಾಲಿಸುತ್ತೇವೆ. ಉಳಿದವರು ಏನು ಹೇಳುತ್ತಾರೋ ಗೊತ್ತಿಲ್ಲ. ನನ್ನ ನಿರ್ಧಾರ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಲಿದೆ ಎಂದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا