Urdu   /   English   /   Nawayathi

ಬೆಳಗಾವಿ: ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಯುವತಿಗೆ ಬ್ಲ್ಯಾಕ್ ಮೇಲ್, ಯುವಕನ ಬಂಧನ

share with us

ಬೆಳಗಾವಿ: 25 ಜುಲೈ 2019 (ಫಿಕ್ರೋಖಬರ್ ಸುದ್ದಿ) ಯುವತಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಬೆಳಗಾವಿ ಸಿಇಎನ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗುಜರಾತ್ ಮೂಲದ 24 ವರ್ಷದ ಮಿಥುಲ್ ಕಾನ್ಸಾರಾ ಬಂಧಿತ ಆರೋಪಿ. ಈತ ಪಬ್ ಜಿ ಗೇಮ್ ಮೂಲಕ ಬೆಳಗಾವಿ ಮೂಲದ ಯುವತಿಯೊಂದಿಗೆ ಸ್ನೇಹ ಬೆಳೆಸಿ, ತಾನು ಮುಂಬೈ ನಿವಾಸಿಯಾಗಿದ್ದು, 3 ಲಕ್ಷ ರೂ. ಸಂಬಳ ಪಡೆಯುತ್ತಿರುವುದಾಗಿ ಹೇಳಿದ್ದ. ನಂತರ ಆತನ ಬಣ್ಣದ ಮಾತಿಗೆ ಮರುಳಾದ ಯುವತಿ ಪ್ರೀತಿಯಲ್ಲಿ ಬಿದ್ದು, ಆತನನ್ನು ಭೇಟಿ ಆಗಲು ಮುಂಬೈಗೆ ಹೋಗಿದ್ದಳು. ಅಲ್ಲಿ ಆತನೊಂದಿಗೆ ಲಾಡ್ಜ್ನಲ್ಲಿ ತಂಗಿದ್ದಳು. ಈ ವೇಳೆ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನ್ನು ಆತ ರಹಸ್ಯವಾಗಿ ವಿಡಿಯೋ ಚಿತ್ರಿಸಿಕೊಂಡಿದ್ದ. ನಂತರ ಯುವತಿ ಮುಂಬೈನಿಂದ ಬೆಳಗಾವಿಗೆ ವಾಪಸ್ಸಾದ ಬಳಿಕ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ. ಹಣ ಕೊಡಲು ನಿರಾಕರಿಸಿದಾಗ, ಆಕೆಯ ಸ್ನೇಹಿತರ ಫೇಸ್ ಬುಕ್ಗೆ ಅಶ್ಲೀಲವಾದ ಫೋಟೋ ಕಳುಹಿಸಲು ಆರಂಭಿಸಿದ್ದ. ಇದರಿಂದ ತೀವ್ರವಾಗಿ ಮನನೊಂದ ಯುವತಿ ಬೆಳಗಾವಿ ಸೈಬರ್ ಕ್ರೈಂ ಪೊಲೀಸರಿಗೆ ಆತನ ವಿರುದ್ಧ ದೂರು ನೀಡಿದ್ದಳು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا