Urdu   /   English   /   Nawayathi

ರೈಲ್ವೆಯ ಡಿಸ್ಕೌಂಟ್​ ಟಿಕೆಟ್ ಬಗ್ಗೆ ಮಹತ್ವದ ನಡೆ ಘೋಷಿಸಿದ ಗೋಯಲ್

share with us

ನವದೆಹಲಿ: 25 ಜುಲೈ 2019 (ಫಿಕ್ರೋಖಬರ್ ಸುದ್ದಿ) ಪ್ರಯಾಣಿಕರ ಸಾಂದ್ರತೆಗೆ ತಕ್ಕಂತೆ ರಾಜಧಾನಿ ಎಕ್ಸ್​ಪ್ರೆಸ್ ಸೇರಿದಂತೆ ಕೆಲವು ಪ್ರಮುಖ ರೈಲುಗಳ ಫ್ಲೆಕ್ಸಿ (ಸಂದರ್ಭಾನುಸಾರ) ದರ ನೀತಿಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟನೆ ನೀಡಿದೆ. ಲೋಕಸಭೆಯಲ್ಲಿ ರೈಲ್ವೆ ಟಿಕೆಟ್​ ದರ ಏರಿಕೆಯ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ರೈಲ್ವೆ ಸಚಿವ ಪಿಯೂಷ್ ಗೋಯಲ್​, ಫ್ಲೆಕ್ಸಿ ದರ ಜಾರಿ ಆದಗಿನಿಂದ 2019ರ ಜೂನ್​​ವರೆಗೆ 2,426 ಕೋಟಿಯಷ್ಟು ಹೆಚ್ಚುವರಿ ಆದಾಯ ಬಂದಿದೆ. 141 ರೈಲುಗಳು ಫ್ಲೆಕ್ಸ್​​ ದರ ವ್ಯಾಪ್ತಿಯಲ್ಲಿವೆ. ಇದರಲ್ಲಿ ಪ್ರಸ್ತುತ 32 ರೈಲುಗಳಿಗೆ ಮಾತ್ರ ಒಂಬತ್ತು ತಿಂಗಳ ಅವಧಿಗೆ ಫ್ಲೆಕ್ಸಿ ಶುಲ್ಕ ಅನ್ವಯವಾಗುತ್ತದೆ. ಈ ಯೋಜನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಯಾವುದೇ ಪಸ್ತಾಪ ರೈಲ್ವೆ ಇಲಾಖೆಯ ಮುಂದಿಲ್ಲ ಎಂದರು. ಫ್ಲೆಕ್ಸಿ ರೈಲುಗಳ ಪ್ರಯಾಣ ದರವು ವಿಮಾನ ಪ್ರಯಾಣ ದರಕ್ಕಿಂತಲೂ ಹೆಚ್ಚಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ರೈಲ್ವೆ ಮತ್ತು ವಿಮಾನಯಾನ ಸಾರಿಗೆಗಳು ಪರಸ್ಪರವಾಗಿ ಸಂಪೂರ್ಣ ಭಿನ್ನವಾದವು. ಅವುಗಳು ಸಂಪರ್ಕ, ಗಾತ್ರ ಮತ್ತು ಅನುಕೂಲತೆಯ ದೃಷ್ಟಿಯಿಂದ ಹೋಲಿಕೆ ಸಲ್ಲದು. ವಿಮಾನಯಾನ ಸಂಸ್ಥೆಗಳಿಗೆ ಶುಲ್ಕ ನಿಗದಿತ ಗರಿಷ್ಠ ಮಿತಿಯಿಲ್ಲ, ಆದರೆ, ರೈಲ್ವೆಯು ವರ್ಷದುದ್ದಕ್ಕೂ ಗರಿಷ್ಠ ಶುಲ್ಕವನ್ನು ನಿಗದಿಪಡಿಸಿದೆ. ಕಾರ್ಯಾಚರಣೆ, ಸಮಯ, ಪ್ರಯಾಣದ ಅವಧಿ, ನಿಲುಗಡೆ, ತಲುಪಲಿರುವ ಸ್ಥಳಗಳನ್ನು ಅವಲಂಬಿಸಿಯೇ ವಿಮಾನ ಶುಲ್ಕ ಬದಲಾಗುತ್ತದೆ ಎಂದು ಹೇಳಿದರು.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا