Urdu   /   English   /   Nawayathi

ಶಾಕಿಂಗ್​...!! ಮಹಿಳೆಯ ಹೊಟ್ಟೆಯಲ್ಲಿತ್ತು ಇಷ್ಟೊಂದು ಆಭರಣ, ನಾಣ್ಯ..!

share with us

ಬಿರ್ಭಮ್​​(ಪಶ್ಚಿಮ ಬಂಗಾಳ): 25 ಜುಲೈ 2019 (ಫಿಕ್ರೋಖಬರ್ ಸುದ್ದಿ) ಮಾನಸಿಕ ಅಸ್ವಸ್ಥೆವೋರ್ವಳ ದೇಹ ಸೇರಿದ್ದ ಒಂದೂವರೆ ಕಿಲೋ ಆಭರಣ ಹಾಗೂ ಹತ್ತಾರು ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಭಮ್​​ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಹೌಹಾರಿದ್ದರು. ಮಹಿಳೆಯ ದೇಹದಲ್ಲಿ ಐದು ಹಾಗೂ ಹತ್ತು ರೂ. ಮೌಲ್ಯದ ಬರೋಬ್ಬರಿ 90 ನಾಣ್ಯಗಳಿದ್ದವು. ಆಪರೇಷನ್ ಮೂಲಕ ನಾಣ್ಯದ ಹೊರತಾಗಿ ಚೈನ್​​, ಮೂಗುತಿ, ಕಿವಿಯೋಲೆ, ಬಳೆ ಸೇರಿದಂತೆ ಒಂದೂವರೆ ಕೆಜಿ ಆಭರಣವನ್ನು ಮಹಿಳೆಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ.

woman

ಬಹುತೇಕ ಆಭರಣಗಳು ತಾಮ್ರ ಮತ್ತು ಹಿತ್ತಾಳೆಯಿಂದ ಮಾಡಲ್ಪಟ್ಟಿದ್ದರೆ ಒಂದಷ್ಟು ಚಿನ್ನದ ಆಭರಣಗಳೂ ಸೇರಿವೆ ಎಂದು ಆಪರೇಷನ್ ನಡೆಸಿದ ಡಾಕ್ಟರ್​ ಬಿಸ್ವಾಸ್ ಹೇಳಿದ್ದಾರೆ. ಮನೆಯಲ್ಲಿನ ಪ್ರತಿನಿತ್ಯ ಆಭರಣಗಳು ಸದ್ದಿಲ್ಲದೆ ನಾಪತ್ತೆಯಾಗುತ್ತಿರುವುದು ಆಕೆಯ ತಾಯಿಯ ಅರಿವಿಗೆ ಬಂದಿತ್ತು. ತಾಯಿಯ ಹೇಳಿಕೆಯಂತೆ ನಾಣ್ಯಗಳನ್ನು ಈ ಮಹಿಳೆ ತನ್ನ ಸೋದರಮಾವನ ಅಂಗಡಿಯಿಂದ ತೆಗೆದುಕೊಂಡಿದ್ದಳಂತೆ. ಇನ್ನು ಆಭರಣಗಳ ಬಗ್ಗೆ ಆಕೆಯ ಬಳಿ ಕೇಳಿದಾಗ ಅಳುತ್ತಿದ್ದಳಂತೆ. ನಂತರ ಆಕೆಯ ಚಟುವಟಿಕೆಯ ಮೇಲೆ ತೀವ್ರ ನಿಗಾ ವಹಿಸಿದಾಗ ಆಭರಣಗಳನ್ನು ತಿನ್ನುತ್ತಿದ್ದಿದ್ದು ಗಮನಕ್ಕೆ ಬಂದಿತ್ತು. ಹೀಗಾಗಿ ಕಳೆದೆರಡು ತಿಂಗಳಿನಿಂದ ಆಕೆಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಹಿಳೆಯ ತಾಯಿ ಮಾಹಿತಿ ನೀಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا