Urdu   /   English   /   Nawayathi

ಕಾನೂನುಬಾಹಿರ ಚಟುವಟಿಕೆ ಕಾಯಿದೆ: ಕಾಂಗ್ರೆಸ್​ನತ್ತ ಬೆರುಳು ತೋರಿಸಿದ ಒವೈಸಿ

share with us

ನವದೆಹಲಿ: 24 ಜುಲೈ 2019 (ಫಿಕ್ರೋಖಬರ್ ಸುದ್ದಿ) ಕಾನೂನು ಬಾಹಿರ ಚಟುವಟಿಕೆ ತಡೆ ತಿದ್ದುಪಡಿ ಮಸೂದೆ, 2019ರ ಚರ್ಚೆಯ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಂಗ್ರೆಸ್​ನತ್ತ ಬೆರಳು ತೋರಿಸಿದ್ದಾರೆ. ಲೋಕಸಭೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ತಿದ್ದುಪಡಿ ಕಾಯ್ದೆ ಕುರಿತು ಮಾತಿಗಿಳಿದ ಅಸಾದುದ್ದೀನ್ ಒವೈಸಿ, ಇದಕ್ಕೆ ನಾನು ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತೇನೆ. ಈ ಕಾನೂನನ್ನು ಜಾರಿ ಆಗಲು ಅವರೇ ಮುಖ್ಯ ಕಾರಣ. ಮೊದಲು ಕಾಂಗ್ರೆಸ್​ನವರು ಅಪರಾಧಿಗಳಾಗುತ್ತಾರೆ ಎಂದು ದೂರಿದರು. ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಬಿಜೆಪಿಗಿಂತ ದೊಡ್ಡವರಾಗಿದ್ದರು. ಅವರು ಅಧಿಕಾರ ಕಳೆದುಕೊಂಡಾಗ ಮುಸ್ಲಿಮರು ದೊಡ್ಡಣ್ಣನಂತೆ ಕಾಣುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ಕಾಯ್ದೆ ತಿದ್ದುಪಡಿ ಕುರಿತು ನಿನ್ನೆಯೂ ಮಾತನಾಡಿದ ಕಾಂಗ್ರೆಸ್​ ಮನೀಶ್ ತಿವಾರಿ, ಕಠಿಣ ಕಾನೂನುಗಳನ್ನು ಜಾರಿಗೆ ತಂದಾಗಲೆಲ್ಲಾ ಅವುಗಳನ್ನು ದುರಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿಯನ್ನು ದೂರಿದರು. 

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا