Urdu   /   English   /   Nawayathi

‘ನಮ್ಮ ನಾಯಕರು ಅನುಮತಿ ಕೊಟ್ರೆ, ನಿಮ್ಮ ಸರ್ಕಾರ ಇರಲ್ಲ’!

share with us

ಭೋಪಾಲ್: 24 ಜುಲೈ 2019 (ಫಿಕ್ರೋಖಬರ್ ಸುದ್ದಿ) ನಮ್ಮ ಪಕ್ಷದ ನಂಬರ್​ 1 ಅಥವಾ ನಂಬರ್ 2 ನಾಯಕರೇನಾದ್ರೂ ಅನುಮತಿ ನೀಡಿದ್ರೆ, ಮುಂದಿನ 24 ಗಂಟೆಗಳಲ್ಲಿ ಕಾಂಗ್ರೆಸ್​ ಸರ್ಕಾರ ಇರಲ್ಲ ಎಂದು ಮಧ್ಯಪ್ರದೇಶ ಬಿಜೆಪಿ ನಾಯಕ ಗೋಪಾಲ್​ ಭಾರ್ಗವ ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷದ ಮೈತ್ರಿ ಸರ್ಕಾರ ಪತನವಾದ 24 ಗಂಟೆಗಳಲ್ಲೇ ಅಚ್ಚರಿಯ ಮಾತು ಕೇಳಿ ಬಂದಿದೆ. ಮಧ್ಯಪ್ರದೇಶದ ವಿರೋಧ ಪಕ್ಷದ ನಾಯಕ ಗೋಪಾಲ್​ ಭಾರ್ಗವ ವಿಧಾನಸಭೆಯಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಕರ್ನಾಟಕಕ್ಕಿಂತ ತೀರಾ ಹೀನಾಯವಾದ ಪರಿಸ್ಥಿತಿ ಇದೆ. ಆದರೂ ಸರ್ಕಾರ 7 ತಿಂಗಳು ಪೂರೈಸಿರೋದು ನನಗೆ ಆಶ್ಚರ್ಯ ತರಿಸಿದೆ ಎಂದಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ರಾಜ್ಯಗಳಲ್ಲಿ ಹಲವು ಶಾಸಕರು ಬಿಜೆಪಿ ಪಕ್ಷ ಸೇರುತ್ತಿದ್ದಾರೆ ಎಂದಿದ್ದಾರೆ. ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ಪ್ರತಿಕ್ರಿಯಿಸಿ, ನಿಮ್ಮ ನಂಬರ್​ 1 ಮತ್ತು ನಂಬರ್​ 2 ನಾಯಕರು ತುಂಬಾ ಸಂವೇದನಾಶೀಲರು. ಹೀಗಾಗಿಯೇ ಅಂತಾ ಯಾವುದೇ ಆದೇಶ ನೀಡುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا